ಭಾರತ, ಅವೆುರಿಕ ಅತ್ಯುತ್ತಮ ಹೂಡಿಕೆ-ಸ್ನೇಹಿ ದೇಶಗಳು : ಅಧ್ಯಯನ

ನ್ಯೂಯಾರ್ಕ್, ಡಿ. 15: ಭಾರತ ಮತ್ತು ಅಮೆರಿಕಗಳು ಪಾರದರ್ಶಕತೆಯಲ್ಲಿ ಜಗತ್ತಿನ ಅತ್ಯುತ್ತಮ ಎರಡು ಹೂಡಿಕೆ-ಸ್ನೇಹಿ ದೇಶಗಳಾಗಿವೆ ಎಂದು ‘ಮಾರ್ನಿಂಗ್ ಸ್ಟಾರ್ ಇಂಕ್’ ನಡೆಸಿದ ಜಾಗತಿಕ ಅಧ್ಯಯನವೊಂದು ತಿಳಿಸಿದೆ. ಅದೇ ವೇಳೆ, ಆಸ್ಟ್ರೇಲಿಯವು ಪಟ್ಟಿಯ ಕೊನೆಯಲ್ಲಿದೆ.
ಉತ್ತರ ಅಮೆರಿಕ, ಯುರೋಪ್, ಏಶ್ಯ ಮತ್ತು ಆಫ್ರಿಕಗಳಾದ್ಯಂತವಿರುವ 26 ದೇಶಗಳಲ್ಲಿ ಅಧ್ಯಯನ ನಡೆಸಲಾಗಿದೆ.
‘‘ಈ ಕ್ಷೇತ್ರದಲ್ಲಿ ಅಮೆರಿಕವು ನಿರಂತರವಾಗಿ ಮುಂಚೂಣಿಯಲ್ಲಿದೆ. ಭಾರತವು ಹಂತ ಹಂತವಾಗಿ ಪಾರದರ್ಶಕತೆಯನ್ನು ಕಾಯ್ದುಕೊಂಡು ಬರುವ ಉತ್ತಮ ಕ್ರಮಗಳನ್ನು ಜಾರಿಗೊಳಿಸುತ್ತಿದೆ’’ ಎಂದು ‘ಮಾರ್ನಿಂಗ್‌ಸ್ಟಾರ್’ ನ ಮ್ಯಾನೇಜರ್ ರಿಸರ್ಚ್ ಸರ್ವಿಸಸ್‌ನ ನಿರ್ದೇಶಕಿ ಕ್ರಿಸ್ಟೀನಾ ವೆಸ್ಟ್ ಹಾಗೂ ಅಧ್ಯಯನದ ಸಹ ಲೇಖಕಿ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.
Next Story





