ತುಂಗಾನಗರ ಪೊಲೀಸರ ಕಾರ್ಯಾಚರಣೆ: ಇಬ್ಬರು ಸುಲಿಗೆ ಯತ್ನ ಆರೋಪಿಗಳ ಬಂಧನ

ಶಿವಮೊಗ್ಗ: ತುಂಗಾನಗರ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ ಸುಲಿಗೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಶರಾವತಿ ನಗರದ ನಿವಾಸಿ ಹರೀಶ್ ಮತ್ತು ಶಾರೂಖ್ ಬಂಧಿತ ಆರೋಪಿಗಳು. ಸೈಕಲ್ ಕ್ಲಬ್ ನ ಸದಸ್ಯ ಸಮರ್ಥ್ ಎಂಬಾತ ಡಿ.14 ರಂದು ಬೆಳಗಿನ ಜಾವ ಹೊರಟು ಸಿದ್ದರ ಗವಿ ತಲುಪಿ ವಾಪಾಸು ಬರುತ್ತಿದ್ದ ವೇಳೆ ಬೈಕಿನಲ್ಲಿ ಬಂದ ಈ ಆರೋಪಿತರು ಸಕ್ರೆಬೈಲಿನಲ್ಲಿ ಸುಲಿಗೆಗೆ ಯತ್ನಿಸಿದ್ದಾರೆ. ಸಮರ್ಥ್ ಜೊತೆ ಇದ್ದ ಮೊಬೈಲ್ ಹಾಗೂ ಹಣವನ್ನು ಎಗರಿಸಲು ಯತ್ನಿಸಿದ್ದಾರೆ. ಈ ವೇಳೆ ಸಮರ್ಥ್ ಜೊತೆ ಬಂದ ಇತರೆ ಸೈಕಲ್ ಕ್ಲಬ್ ನ ಸದಸ್ಯರು ಸಮರ್ಥ್ ನ ನೆರವಿಗೆ ಬಂದಿದ್ದಾರೆ. ತಕ್ಷಣ ಆರೋಪಿತರಿಬ್ಬರು ಪರಾರಿಯಾಗಿದ್ದಾರೆ.
ನಂತರ ಸೈಕಲ್ ಕ್ಲಬ್ ನ ಸದಸ್ಯ ನಿರ್ದೇಶಕ ಹರೀಶ್ ಎಸ್ ಪಾಟೀಲ್ ತುಂಗಾ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ದೂರು ದಾಖಲಿಸಿಕೊಂಡ ತುಂಗಾನಗರ ಪಿಎಸ್ಐ ತಿರುಮಲೇಶ್, ಎಸ್ಎಸ್ಐ ನಾರಾಯಣ್, ಪಿ.ಸಿ ಗುರುನಾಯ್ಕ್ ಹಾಗೂ ರಾಜು ಇವರನ್ನೊಳಗೊಂಡ ತಂಡ ಮಿಂಚಿನ ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಕೃತ್ಯಕ್ಕೆ ಬಳಸಿದ್ದ ಬೈಕ್ ಜಪ್ತಿ ಮಾಡಿದ್ದಾರೆ.





