ಬಿಜೆಪಿಗಿಂತ ದೊಡ್ಡ ಕಳ್ಳರಿಲ್ಲ, ಅವರು ಛಂಬಲ್ ಡಕಾಯಿತರು: ಮಮತಾ ಬ್ಯಾನರ್ಜಿ

ಕೊಲ್ಕತ್ತಾ,ಡಿ.15: ಕೇಂದ್ರ ಸರಕಾರ ಮತ್ತು ಬಿಜೆಪಿ ಪಕ್ಷದ ವಿರುದ್ಧ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಾಗ್ದಾಳಿ ಮುಂದುವರಿಸಿದ್ದಾರೆ. ಪಶ್ಚಿಮ ಬಂಗಾಳದ ಜಲ್ಪೈಗುರಿ ಎಂಬಲ್ಲಿ ಮಾತನಾಡಿದ ಅವರು, “ಬಿಜೆಪಿಗಿಂತ ದೊಡ್ಡ ಕಳ್ಳರಿಲ್ಲ, ಅವರು ಛಂಬಲ್ ಡಕಾಯಿತರು ಎಂದು ಹರಿಹಾಯ್ದಿದ್ದಾರೆ.
“ಬಿಜೆಪಿಗರಿಗಿಂತ ದೊಡ್ಡ ಕಳ್ಳರಿಲ್ಲ, ಅವರು ಛಂಬಲ್ ಡಕಾಯಿತರು. 2014, 2016 ಮತ್ತು 2019ರ ಚುನಾವಣೆಯ ಸಂದರ್ಭದಲ್ಲಿ ಏಳು ಟೀ ಗಾರ್ಡನ್ ಗಳನ್ನು ತೆರೆಯುತ್ತೇವೆ ಮಾತ್ರವಲ್ಲದೇ ಕೇಂದ್ರ ಸರಕಾರ ಅವೆಲ್ಲದರ ಉಸ್ತುವಾರಿ ವಹಿಸಿಕೊಳ್ಳಲಿದೆ ಎಂದು ಆಶ್ವಾಸನೆ ನೀಡಿದ್ದರು. ಆದರೆ ಇದುವರೆಗೂ ಅದ್ಯಾವುದೂ ಈಡೇರಿಲ್ಲ. ಇದೀಗ ಉದ್ಯೋಗ ನೀಡುತ್ತೇವೆ ಎನ್ನುತ್ತಿದ್ದಾರೆ. ಅವರು ಮೋಸವನ್ನಷ್ಟೇ ಮಾಡುತ್ತಿದ್ದಾರೆ ಎಂದು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Next Story





