ಗ್ರಾಮ ಪಂಚಾಯತ್ ಚುನಾವಣೆಗೆ ಗಂಡ- ಹೆಂಡತಿ, ಮಗ ಸ್ಪರ್ಧೆ !

ಪಾಂಡವಪುರ, ಡಿ.15: ತಾಲೂಕಿನ ಕೆನ್ನಾಳು ಗ್ರಾಮ ಪಂಚಾಯತ್ ವ್ಯಾಪ್ತಿಯ ಹರಳಹಳ್ಳಿ ಗ್ರಾಮದ ಒಂದೇ ಕುಟುಂಬದ ಗಂಡ, ಹೆಂಡತಿ ಮತ್ತು ಮಗ ಗ್ರಾಮ ಪಂಚಾಯತ್ ಚುನಾವಣೆಗೆ ಸ್ಪರ್ಧಿಸಿ ಗಮನ ಸೆಳೆದಿದ್ದಾರೆ.
ಹರಳಹಳ್ಳಿ ಗ್ರಾಮದ ಸಾಮಾನ್ಯ ಮೀಸಲಾತಿಗೆ ಸೇರಿದ 1ನೇ ವಾರ್ಡ್ ನಿಂದ ಪಾಂಡವಪುರ ತಾಲೂಕು ಅಂಬರೀಶ್ ಅಭಿಮಾನಿಗಳ ಸಂಘದ ಅಧ್ಯಕ್ಷ ಅಂಬಿ ಸುಬ್ಬಣ್ಣ ಹಾಗೂ ಇವರ ಪತ್ನಿ ಸುಮಿತ್ರ ಸುಬ್ಬಣ್ಣ ವಿಶ್ವೇಶ್ವರನಗರ ಬಡಾವಣೆಯ ಬಿಸಿಎಂ ‘ಬಿ’ ಮಹಿಳೆ ಮೀಸಲು ಕ್ಷೇತ್ರದ 3ನೇ ವಾರ್ಡ್ ನಿಂದ ಮತ್ತು ಅಂಬಿ ಸುಬ್ಬಣ್ಣ ದಂಪತಿಯ ಪುತ್ರ ಎಸ್.ಅಭಿಷೇಕ್ ಸುಬ್ಬಣ್ಣ ಹರಳಹಳ್ಳಿ ಗ್ರಾಮದ ಸಾಮಾನ್ಯ ಮೀಸಲು 2ನೇ ವಾರ್ಡ್ ನಿಂದ ಸ್ಪರ್ಧೆ ಬಯಸಿ ನಾಮಪತ್ರ ಸಲ್ಲಿಸಿದ್ದಾರೆ.
Next Story





