ಕಾಸರಗೋಡು : ಡಿ. 15ರಿಂದ ನಿಷೇಧಾಜ್ಞೆ ಜಾರಿ
ಕಾಸರಗೋಡು : ಸ್ಥಳೀಯಾಡಳಿತ ಸಂಸ್ಥೆ ಚುನಾವಣೆಯ ಮತ ಎಣಿಕೆ ಹಿನ್ನಲೆಯಲ್ಲಿ ಡಿ. 15ರ ರಾತ್ರಿ 12 ಗಂಟೆಯಿಂದ ಡಿ . 17 ರ ರಾತ್ರಿ 12 ಗಂಟೆ ತನಕ ಜಿಲ್ಲೆಯ ಸೂಕ್ಷ್ಮ ಸ್ಥಳಗಳಲ್ಲಿ 144 ರಂತೆ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಆದೇಶ ನೀಡಿದ್ದಾರೆ.
ಅಹಿಕತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮ ದಂಗವಾಗಿ ನಿಷೇಧಾಜ್ಞೆ ಜಾರಿಗೊಳಿಸಿರುವುದಾಗಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಜನರು ಗುಂಪುಗೂಡುವುದು , ಮೆರವಣಿಗೆ ನಡೆಸುವುದು ಮೊದಲಾದವುಗಳನ್ನುನಿಷೇಧಿಸಲಾಗಿದೆ . ಮಂಜೇಶ್ವರ ಪೊಲೀಸ್ ಠಾಣೆ ಯ ಉಪ್ಪಳ , ಮಂಜೇಶ್ವರ , ಹೊಸಂಗಡಿ , ಕುಂಜತ್ತೂರು, ಅದೂರು ಪೊಲೀಸ್ ಠಾಣಾ ವ್ಯಾಪ್ತಿಯ ಬೋವಿಕ್ಕಾನ , ಇರಿಯಣ್ಣಿ , ಅಡೂರು, ಕುಂಬಳೆ ಠಾಣಾ ವ್ಯಾಪ್ತಿಯ ಬಂದ್ಯೋಡು , ಅಡ್ಕ , ಸೀತಾಂಗೋಳಿ , ಉಳುವಾರು , ಮೊಗ್ರಾಲ್ , ಬಂಬ್ರಾಣ , ಕಾಸರಗೋಡು ನಗರಸಭಾ ವ್ಯಾಪ್ತಿ , ಕಾಸರಗೋಡು ಪೊಲೀಸ್ ಠಾಣಾ ವ್ಯಾಪ್ತಿ , ಮೇಲ್ಪರಂಬ , ವಿದ್ಯಾನಗರ ಕಾಞ0 ಗಾಡ್ ನಗರಸಭಾ, ಅಜನೂರು , ಪಂಚಾಯತ್ , ಬೇಕಲ ಪೊಲೀಸ್ ಠಾಣಾ ವ್ಯಾಪ್ತಿ , ಪೆರಿಯ ಗ್ರಾಮ ಪಂಚಾಯತ್ , ಚಂದೇರ ಪೊಲೀಸ್ ಠಾಣಾ ವ್ಯಾಪ್ತಿಯ ಪಡನ್ನ , ಪಿಲಿಕ್ಕೋಡ್ ಗ್ರಾಮ ಪಂಚಾಯತ್, ನೀಲೇಶ್ವರ ಪೊಲೀಸ್ ಠಾಣೆ , ನಗರಸಭಾ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ