ಅಟಾರ್ನಿ ಜನರಲ್ ಬಿಲ್ ಬರ್ ರಾಜೀನಾಮೆ: ಟ್ರಂಪ್

ವಾಶಿಂಗ್ಟನ್, ಡಿ. 15: ಅಟಾರ್ನಿ ಜನರಲ್ ಬಿಲ್ ಬರ್ ಕ್ರಿಸ್ಮಸ್‌ಗೆ ಮುನ್ನ ತನ್ನ ಹುದ್ದೆಗೆ ರಾಜೀನಾಮೆ ನೀಡಲಿದ್ದಾರೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ ಘೋಷಿಸಿದ್ದಾರೆ.
ನವೆಂಬರ್ 3ರಂದು ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಪ್ರತಿಪಕ್ಷ ಡೆಮಾಕ್ರಟಿಕ್ ಪಕ್ಷದವರು ಭಾರೀ ಪ್ರಮಾಣದಲ್ಲಿ ವಂಚನೆ ನಡೆಸಿದ್ದಾರೆ ಎಂಬ ಟ್ರಂಪ್ ಆರೋಪಗಳನ್ನು ದೃಢೀಕರಿಸಲು ಬಿಲ್ ಬರ್ ನಿರಾಕರಿಸಿದ ಬಳಿಕ ಅವರು ಟ್ರಂಪ್‌ರ ಅವಕೃಪೆಗೆ ಗುರಿಯಾಗಿದ್ದಾರೆ.
‘‘ನಮ್ಮ ಸಂಬಂಧ ತುಂಬಾ ಉತ್ತಮವಾಗಿದೆ. ಕುಟುಂಬದ ಜೊತೆ ರಜೆ ಕಳೆಯುವುದಕ್ಕಾಗಿ ಬಿಲ್ ಕ್ರಿಸ್ಮಸ್‌ಗೆ ಮುನ್ನ ಅಧಿಕಾರದಿಂದ ಕೆಳಗಿಳಿಯಲಿದ್ದಾರೆ’’ ಎಂಬುದಾಗಿ ಟ್ರಂಪ್ ಟ್ವೀಟ್ ಮಾಡಿದ್ದಾರೆ.
Next Story





