ಸ್ನೇಹಿತನ ಪತ್ನಿಯನ್ನು ಅತ್ಯಾಚಾರ ಗೈದ ಆರೋಪ: ಸೇನಾಧಿಕಾರಿಯ ಸೆರೆ

ಕಾನ್ಪುರ: ತನ್ನ ಸ್ನೇಹಿತನ ಪತ್ನಿಯನ್ನೇ ಅತ್ಯಾಚಾರ ಮಾಡಿರುವ ಆರೋಪ ಹೊತ್ತಿರುವ ಸೇನಾ ಕರ್ನಲ್ ನನ್ನು ಉತ್ತರಪ್ರದೇಶ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
ನಿಗೂಢ ಸ್ಥಳಕ್ಕೆ ಪರಾರಿಯಾಗಲು ಯತ್ನಿಸುತ್ತಿದ್ದ ಕರ್ನಲ್ ನೀರಜ್ ಗೆಹ್ಲೋಟ್ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧೀಕ್ಷಕ(ಪೂರ್ವ)ರಾಜ್ ಕುಮಾರ್ ಅಗರ್ವಾಲ್ ತಿಳಿಸಿದ್ದಾರೆ.
ಕರ್ನಲ್ ನೀರಜ್ ಅಧಿಕಾರಿಗಳ ಮೆಸ್ ನಲ್ಲಿ ತನ್ನ ಸ್ನೇಹಿತನ ಪ್ರಜ್ಞೆ ತಪ್ಪಿಸಿ ಆತನ ರಶ್ಯ ಮೂಲದ ಪತ್ನಿಯನ್ನುರವಿವಾರ ಅತ್ಯಾಚಾರ ನಡೆಸಿರುವ ಆರೋಪ ಕೇಳಿಬಂದಿದೆ. ಮಹಿಳೆಯ ಪತಿ ಕಂಟೋನ್ಮೆಂಟ್ ಪೊಲೀಸ್ ಠಾಣೆಯಲ್ಲಿ ಸೇನಾಧಿಕಾರಿಯ ವಿರುದ್ಧ ಎಫ್ ಐಆರ್ ದಾಖಲಿಸಿದ್ದರು ಎಂದು ಎಸ್ಪಿ ಅಗರ್ವಾಲ್ ತಿಳಿಸಿದ್ದಾರೆ.
Next Story





