ಉಪರಾಷ್ಟ್ರಪತಿಗಳಿಂದ ಎಂ.ವಿ.ಕಾಮತ್ ದತ್ತಿ ಉಪನ್ಯಾಸ
ಉಡುಪಿ, ಡಿ.16: ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಡಿ.18ರ ಶುಕ್ರವಾರ ಬೆಳಗ್ಗೆ 10:30ರಿಂದ 11:00ರವರೆಗೆ ವರ್ಚುವೆಲ್ ಮಾದರಿಯಲ್ಲಿ ಮಾಹೆಯ ಮಣಿಪಾಲ್ ಇನ್‌ಸ್ಟಿಟ್ಯೂಟ್ ಆಫ್ ಕಮ್ಯುನಿಕೇಷನ್ (ಎಂಐಸಿ) ನಲ್ಲಿ ಎಂ.ವಿ.ಕಾಮತ್ ದತ್ತಿ ಉಪನ್ಯಾಸ ನೀಡಲಿದ್ದಾರೆ.
ಕಾರ್ಯಕ್ರಮವು ಡಾ.ಟಿಎಂಎ ಪೈ ಸಭಾಂಗಣದ ಮೂರನೇ ಮಹಡಿಯಲ್ಲಿ ನಡೆಯಲಿದೆ. ಮಾಹೆಯ ಪ್ರೊ ಚಾನ್ಸಲರ್ ಡಾ.ಎಚ್.ಎಸ್.ಬಲ್ಲಾಳ್, ವಿವಿಯ ಕುಲಪತಿ ಲೆ.ಜ.ಡಾ.ಎಂ.ಡಿ.ವೆಂಕಟೇಶ್ ಹಾಗೂ ವಿವಿಯ ಇತರ ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿರುವರು. ಕಾರ್ಯಕ್ರಮ ರಾಜ್ಯಸಭಾ ಟಿವಿ ಹಾಗೂ ಎಂಐಸಿ ಫೇಸ್‌ಬುಕ್ ಲೈವ್‌ಪೇಜ್‌ನಲ್ಲಿ ನೇರವಾಗಿ ಪ್ರಸಾರಗೊಳ್ಳಲಿದೆ.
Next Story





