ಪೊಕ್ಸೋ ಪ್ರಕರಣ: ಆರೋಪಿ ಬಂಧನ
ಉಡುಪಿ, ಡಿ.16: ಅಪ್ರಾಪ್ತ ಬಾಲಕಿಯನ್ನು ಕುಂದಾಪುರದ ಲಾಡ್ಜ್‌ನಲ್ಲಿ ಇರಿಸಿಕೊಂಡು ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಓರ್ವನನ್ನು ಕುಂದಾಪುರ ಪೊಲೀಸರು ಪೋಕ್ಸೋ ಕಾಯಿದೆಯಡಿ ಡಿ.15ರಂದು ಬಂಧಿಸಿದ್ದಾರೆ.
ಉಪ್ಪಿನಕುದ್ರು ಸಂತೋಷ್ ದೇವಾಡಿಗ(29) ಬಂಧಿತ ಆರೋಪಿ. ಈ ಪ್ರಕರಣದಲ್ಲಿ ಇನ್ನಷ್ಟು ಮಂದಿ ಆರೋಪಿಗಳು ಭಾಗಿಯಾಗಿರುವ ನಿಟ್ಟಿನಲ್ಲಿ ಹೆಚ್ಚಿನ ತನಿಖೆಗಾಗಿ ಸಂತೋಷ್‌ನನ್ನು ಪೊಲೀಸ್ ಕಸ್ಟಡಿಗೆ ಪಡೆದುಕೊಳ್ಳಲಾಗಿದೆ. ಲಾಡ್ಜ್‌ನಲ್ಲಿ ವೇಶ್ಯಾವಾಟಿಕೆ ನಡೆಯುತ್ತಿರುವ ಬಗ್ಗೆ ದೊರೆತ ಮಾಹಿತಿಯಂತೆ ಪೊಲೀಸರು ದಾಳಿ ನಡೆಸಿದ್ದು, ಈ ಸಂಬಂಧ ಪಿಂಪ್ಸ್ ಸತೀಶ್ ಸಾಲ್ಯಾನ್ ಎಂಬಾತನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಈ ಸಂದರ್ಭ ದಲ್ಲಿ ಪರಿಶೀಲಿಸಿದಾಗ ಅದೇ ಲಾಡ್ಜ್‌ನಲ್ಲಿ 15 ವರ್ಷದ ಬಾಲಕಿ ಇರುವುದು ಕಂಡು ಬಂದಿದೆ. ಈ ಸಂಬಂಧ ಬಾಲಕಿಯನ್ನು ಈ ದಂಧೆಯಲ್ಲಿ ತೊಡಗಿಸಿ ಕೊಂಡಿದ್ದ ಸಂತೋಷ್‌ನನ್ನು ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪೊಕ್ಸೋ ಕಾಯಿದೆಯಡಿ ಪ್ರಕರಣದಲ್ಲಿ ಬಂಧಿಸಲಾಗಿದೆ.
Next Story





