ಜೇನು ನೋಣ ದಾಳಿ: ವೃದ್ಧ ಮೃತ್ಯು
ಕುಂದಾಪುರ, ಡಿ.16: ಜೇನು ನೋಣಗಳು ದಾಳಿ ನಡೆಸಿದ ಪರಿಣಾಮ ವೃದ್ಧರೊಬ್ಬರು ಮೃತಪಟ್ಟ ಘಟನೆ ಕನ್ಯಾನ ಕೂಡ್ಲು ಎಂಬಲ್ಲಿ ನಡೆದಿದೆ.
ಮೃತರನ್ನು ಕನ್ಯಾನ ಕೂಡ್ಲು ನಿವಾಸಿ ಜಗನ್ನಾಥ ಶೆಟ್ಟಿ(88) ಎಂದು ಗುರುತಿಸ ಲಾಗಿದೆ. ಇವರು ಡಿ.14ರಂದು ಸಂಜೆ ವಾಕಿಂಗ್ಗಾಗಿ ಮನೆಯ ತೋಟಕ್ಕೆ ಹೋಗಿದ್ದು, ಅಲ್ಲಿ ಗೂಡಿನಲ್ಲಿದ್ದ ಜೇನುನೋಣಗಳು ಇವರ ಇವರಿಗೆ ಕಚ್ಚಿತ್ತೆನ್ನ ಲಾಗಿದೆ. ಇದರಿಂದ ಗಂಭೀರವಾಗಿ ಗಾಯಗೊಂಡು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಜಗನ್ನಾಥ ಶೆಟ್ಟಿ ಡಿ.16ರಂದು ಬೆಳಗ್ಗೆ ಚಿಕಿತ್ಸೆಗೆ ಸ್ವಂದಿಸದೆ ಮೃತಪಟ್ಟಿದ್ದಾರೆ.
ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





