ಕರ್ತವ್ಯನಿರತ ಪೊಲೀಸ್‌ಗೆ ಹಲ್ಲೆ ಖಂಡನೀಯ: ಮುಸ್ಲಿಮ್ ಒಕ್ಕೂಟ
ಮಂಗಳೂರು, ಡಿ.16: ನಗರದ ರಥಬೀದಿಯಲ್ಲಿದ್ದ ಕರ್ತವ್ಯನಿರತ ಪೊಲೀಸ್ ಸಿಬ್ಬಂದಿಗೆ ದುಷ್ಕರ್ಮಿಗಳು ಮಾರಕಾಯುಧದಿಂದ ಹಲ್ಲೆ ನಡೆಸಿರುವುದನ್ನು ದ.ಕ. ಜಿಲ್ಲಾ ಮುಸ್ಲಿಮ್ ತೀವ್ರವಾಗಿ ಖಂಡಿಸಿದೆ.
ಪೊಲೀಸರು ಸಮಾಜದ ರಕ್ಷಕರು, ಅವರ ಮೇಲೆ ಹಲ್ಲೆ ಗಂಭೀರ ಅಪರಾಧವಾಗುತ್ತದೆ. ಇಂತಹ ಕೃತ್ಯ ತಪ್ಪು. ದುಷ್ಕರ್ಮಿಗಳನ್ನು ಶೀಘ್ರ ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಳ್ಳಬೇಕು. ಆದರೆ ಈ ಕೃತ್ಯವನ್ನು ಮಂಗಳೂರಿನ ಕಳೆದ ವರ್ಷದ ಎನ್‌ಆರ್‌ಸಿ ಗೋಲಿಬಾರ್ ಕ್ರಮಕ್ಕೆ ಪ್ರತೀಕಾರವೆಂದು ಬಿಂಬಿಸಿ ಸಮಾಜಕ್ಕೆ ತಪ್ಪು ಮಾಹಿತಿಯನ್ನು ರವಾನಿಸುವುದು ತಪ್ಪು. ಹಲ್ಲೆ ಕೃತ್ಯವನ್ನು ಸಮಗ್ರವಾಗಿ ತನಿಖೆ ನಡೆಸಿ ಹಿರಿಯ ಪೊಲೀಸರು ಈ ಬಗ್ಗೆ ಸಮಾಜಕ್ಕೆ ವಿವರಣೆ ನೀಡಬೇಕಿದೆ ಎಂದು ದ.ಕ. ಜಿಲ್ಲಾ ಮುಸ್ಲಿಮ್ ಒಕ್ಕೂಟದ ಅಧ್ಯಕ್ಷ ಕೆ.ಅಶ್ರಫ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story





