ಟ್ರಂಪ್ ನಿರ್ಗಮನದಿಂದ ಇರಾನ್‌ಗೆ ಖುಷಿಯಾಗಿದೆ: ಹಸನ್ ರೂಹಾನಿ

ಟೆಹರಾನ್ (ಇರಾನ್), ಡಿ. 16: ಅಮೆರಿಕದ ಅಧ್ಯಕ್ಷರಾಗಿ ಜೋ ಬೈಡನ್ ಆಯ್ಕೆಯಾಗಿರುವುದರಿಂದ ಇರಾನ್ ರೋಮಾಂಚನಗೊಂಡಿಲ್ಲ, ಆದರೆ ಅಮೆರಿಕದ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್‌ರ ಅವಧಿ ಕೊನೆಗೊಂಡಿರುವುದಕ್ಕೆ ಅದು ಸಂತೋಷಪಡುತ್ತದೆ ಎಂದು ಇರಾನ್ ಅಧ್ಯಕ್ಷ ಹಸನ್ ರೂಹಾನಿ ಹೇಳಿದ್ದಾರೆ.
ಬುಧವಾರ ಸಚಿವ ಸಂಪುಟ ಸಭೆಯಲ್ಲಿ ಮಾತನಾಡಿದ ಅವರು, ಟ್ರಂಪ್‌ರನ್ನು ‘ಠಕ್ಕ’ ಎಂಬುದಾಗಿ ಬಣ್ಣಿಸಿದರು ಹಾಗೂ ‘ಅವರು ಅಮೆರಿಕದ ಅತಿ ಹೆಚ್ಚು ಕಾನೂನುಭಂಜಕ ವ್ಯಕ್ತಿ’ ಎಂದು ಹೇಳಿದರು.
‘‘ಟ್ರಂಪ್ ಅನೇಕ ದೌರ್ಜನ್ಯಗಳನ್ನು ನಡೆಸಿದ ವ್ಯಕ್ತಿ. ಅವರೊಬ್ಬ ಕೊಲೆಗಾರ, ಭಯೋತ್ಪಾದಕ. ನಮ್ಮ ಲಸಿಕಾ ಕಾರ್ಯಕ್ರಮವನ್ನೂ ಅವರು ಸಹಿಸುವುದಿಲ್ಲ. ಈ ಮನುಷ್ಯ ಎಲ್ಲಾ ನೈತಿಕ ಮತ್ತು ಮಾನವೀಯ ಮೌಲ್ಯಗಳನ್ನು ಕಳೆದುಕೊಂಡ ವ್ಯಕ್ತಿ ಎನ್ನುವುದು ಇದರಿಂದ ಗೊತ್ತಾಗುತ್ತದೆ’’ ಎಂದು ಹಸನ್ ರೂಹಾನಿ ಹೇಳಿದ್ದಾರೆ.
Next Story





