ಜೈನ ಧರ್ಮದ ಬಗ್ಗೆ ಅವಹೇಳನಕಾರಿ ಪೋಸ್ಟ್ : ದೂರು ದಾಖಲು

ಮೂಡುಬಿದಿರೆ : ಜೈನ ಧರ್ಮದ ಬಗ್ಗೆ ಹಾಗೂ ಜೈನ ಮುನಿ ಪರಂಪರೆಯ ಬಗ್ಗೆ ಅವಹೇಳನಕಾರಿ ಪೋಸ್ಟ್ ಗಳು ಹರಿದಾಡುತ್ತಿದ್ದು, ಈ ಬಗ್ಗೆ ಮೂಡುಬಿದಿರೆ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
ವಾಣಿಶ್ರೀ ಎಂಬ ಫೇಸ್ಬುಕ್ ಅಕೌಂಟ್ ನಲ್ಲಿ ಜೈನಮುನಿಗಳ ಬಗ್ಗೆ ಅವಹೇಳನಕಾರಿಯಾಗಿ ಬರೆಯಲಾಗಿದ್ದು, ಸಮಾಜದ ಸ್ವಾಸ್ಥ್ಯ ಹಾಳು ಮಾಡುವ ಹುನ್ನಾರ ನಡೆಯುತ್ತಿದೆ ಎಂದು ಮೂಡಬಿದ್ರಿ ಜೈನ್ ಮಿಲನ್ ಹಾಗೂ ಜೈನ್ ಯುವಸೇನೆಯ ಸದಸ್ಯರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕೆಂದು ಮೂಡುಬಿದಿರೆ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
ಈ ಸಂದರ್ಭದಲ್ಲಿ ಮೂಡಬಿದಿರೆ ಜೈನ್ ಮಿಲನ್ ಅಧ್ಯಕ್ಷರಾದ ಶ್ವೇತ ಜೈನ್, ನಿರ್ದೇಶಕರು ಜಯರಾಜ್ ಕಂಬಳಿ, ಖಜಾಂಚಿ ದಿವ್ಯ ವೀರೇಂದ್ರ, ಯುವ ಜೈನ್ ಮಿಲನ್ ಅಧ್ಯಕ್ಷ ನಿತೇಶ್ ಬಳ್ಳಾಲ್, ಅಕ್ಷಯ್ ಕುಮಾರ್ ಜೈನ್, ಪ್ರಶಾಂತ ಅಭಯ್ ಮುಂತಾದವರು ಉಪಸ್ಥಿತರಿದ್ದರು.
.jpeg)
Next Story







