ಕಾಸರಗೋಡು : ಮಾ.17ರಿಂದ ಎಸೆಸೆಲ್ಸಿ, ಹೈಯರ್ ಸೆಕೆಂಡರಿ ಪರೀಕ್ಷೆ ಆರಂಭ

ಕಾಸರಗೋಡು : ಕೇರಳ ಎಸೆಸೆಲ್ಸಿ ಹಾಗೂ ಹೈಯರ್ ಸೆಕಂಡರಿ, ವೊಕೇಶನಲ್ ಹೈಯರ್ ಸೆಕಂಡರಿ ಪರೀಕ್ಷೆ ಮಾ.17ರಿಂದ ಆರಂಭಗೊಳ್ಳಲಿದೆ. ಕೋವಿಡ್ ಮಾನದಂಡದಂತೆ ಪರೀಕ್ಷೆ ನಡೆಯಲಿದ್ದು, ಮಾ.30 ರ ತನಕ ನಡೆಯಲಿದೆ.
ಮುಖ್ಯಮಂತ್ರಿ ಪಿಣರಾಯಿ ವಿಜಯನ್ ರವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಕೇರಳ ಸಚಿವ ಸಂಪುಟ ಸಭೆ ಈ ತೀರ್ಮಾನ ತೆಗೆದುಕೊಂಡಿದೆ. ಪರೀಕ್ಷೆಯ ಪೂರ್ವ ತಯಾರಿಯನ್ನು ಶಿಕ್ಷಣ ಇಲಾಖೆ ಈಗಾಗಾಲೇ ಆರಂಭಿಸಿದೆ . ಪರೀಕ್ಷೆಯಂಗವಾಗಿ ಪ್ರಾಕ್ಟಿಕಲ್ ತರಗತಿಗಳು ಜನವರಿ ಒಂದರಿಂದ ಆರಂಭಗೊಳ್ಳಲಿದೆ. ಜೂನ್ ತಿಂಗಳಿನಿಂದ ನಡೆಯುತ್ತಿರುವ ಆನ್ ಲೈನ್ ತರಗತಿ ಗಳ ಮರು ಮೌಲ್ಯಮಾಪನ ಹಾಗೂ ಸಂಶಯ ದೂರೀಕರಿಸುವ ನಿಟ್ಟಿನಲ್ಲಿ ಶಾಲಾ ಮಟ್ಟದಲ್ಲಿ ವ್ಯವಸ್ಥೆ ಮಾಡಲಾಗಿದ್ದು , ಮಾದರಿ ಪರೀಕ್ಷೆ ಹಾಗೂ ಕೌನ್ಸಿಲಿಂಗ್ ಶಾಲಾ ಮಟ್ಟದಲ್ಲಿ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.
Next Story





