ಮಲ್ಪೆ ಬಂದರಿನ ನೀರಿಗೆ ಬಿದ್ದು ಮೀನುಗಾರ ಮೃತ್ಯು
ಮಲ್ಪೆ, ಡಿ.17: ಮಲ್ಪೆ ಬಂದರಿನ ಧಕ್ಕೆಯ ನೀರಿಗೆ ಬಿದ್ದು ಮೀನುಗಾರರೊಬ್ಬರು ಮೃತಪಟ್ಟ ಘಟನೆ ನಡೆದಿದೆ.
ಮೃತರನ್ನು ಸುಧೀರ್ ಮುಲ್ಕಿ (30) ಎಂದು ಗುರುತಿಸಲಾಗಿದೆ. ಇವರು ಇತರ ಮೀನುಗಾರರೊಂದಿಗೆ ಜಯಲಕ್ಷ್ಮೀ ಹೆಸರಿನ ಬೋಟಿನಲ್ಲಿ ಮೀನು ಗಾರಿಕೆಗೆ ತೆರಳಿ ಡಿ.14ರಂದು ಮಲ್ಪೆ ಬಂದರಿನ ಧಕ್ಕೆ ಬಂದು ಮೀನು ಖಾಲಿ ಮಾಡಿದ್ದರು. ಡಿ.15ರ ಬೆಳಗ್ಗೆಯಿಂದ ಡಿ.16ರ ಬೆಳಗ್ಗಿನ ಮಧ್ಯಾವಧಿ ಯಲ್ಲಿ ಸುಧೀರ್ ಬೋಟಿನಿಂದ ಧಕ್ಕೆಗೆ ಮೇಲೆ ಹೋಗುವಾಗ ಅಕಸ್ಮಿಕವಾಗಿ ಧಕ್ಕೆಯ ನೀರಿಗೆ ಬಿದ್ದು ಮೃತಪಟ್ಟಿದ್ದಾರೆ.
ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





