ಅಪರಾಧ ತಡೆ ಮಾಸಾಚರಣೆ : ಮೂಡುಬಿದಿರೆಯಲ್ಲಿ ವಾಹನ ಜಾಥಾ

ಮೂಡುಬಿದಿರೆ : ಅಪರಾಧ ತಡೆ ಮಾಸಾಚರಣೆಯ ಅಂಗವಾಗಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮೂಡುಬಿದಿರೆ ಪೊಲೀಸ್ ಠಾಣೆಯ ನೇತೃತ್ವದಲ್ಲಿ ಆಟೋ ರಿಕ್ಷಾ ಚಾಲಕ ಮತ್ತು ಮಾಲಕರು ಹಾಗೂ ಪೊಲೀಸರಿಂದ ಮೂಡುಬಿದಿರೆ ಪೇಟೆಯಲ್ಲಿ ವಾಹನ ಜಾಥಾ ನಡೆಯಿತು.
ಮೂಡುಬಿದಿರೆ ಪೊಲೀಸ್ ನಿರೀಕ್ಷಕ ಬಿ.ಎಸ್ .ದಿನೇಶ್ ಕುಮಾರ್, ಉಪ ನಿರೀಕ್ಷಕ ಸುದೀಪ್, ಆಟೋ ಚಾಲಕ ಮಾಲಕರ ಸಂಘದ ಅಧ್ಯಕ್ಷ ಜಯರಾಮ್ ರಾವ್ , ಉಪಾಧ್ಯಕ್ಷಗಳಾದ ವಿಶ್ವನಾಥ ಬಿ.ಎ, ನಾರಾಯಣ, ಕಾರ್ಯದರ್ಶಿ ಆನಂದ ಪೂಜಾರಿ ಸಹಿತ ಸದಸ್ಯರು ಜಾಥಾದಲ್ಲಿ ಪಾಲ್ಗೊಂಡಿದ್ದರು.
Next Story





