2ನೇ ಹಂತದ ಗ್ರಾ.ಪಂ. ಚುನಾವಣೆ : 4,242 ನಾಮಪತ್ರ ಕ್ರಮಬದ್ಧ; 116 ತಿರಸ್ಕೃರ
ಮಂಗಳೂರು, ಡಿ.17: ದ.ಕ. ಜಿಲ್ಲೆಯಲ್ಲಿ ನಡೆಯಲಿರುವ ಎರಡನೇ ಸುತ್ತಿನ ಗ್ರಾಪಂ ಚುನಾವಣೆಗೆ ಸಂಬಂಧಿಸಿದಂತೆ ನಾಮಪತ್ರಗಳ ಪರಿಶೀಲನೆ ಕಾರ್ಯ ಗುರುವಾರ ಪೂರ್ಣಗೊಂಡಿದ್ದು, ಕ್ರಮಬದ್ಧವಾಗಿ ನಾಮನಿರ್ದೇಶಿತ ಅಭ್ಯರ್ಥಿಗಳ ಸಂಖ್ಯೆಯನ್ನು ಜಿಲ್ಲಾಡಳಿತ ಪ್ರಕಟಿಸಿದೆ.
ಎರಡನೇ ಹಂತದ ಚುನಾವಣೆಗೆ ಒಟ್ಟು 4,356 ನಾಮಪತ್ರಗಳು ಸಲ್ಲಿಕೆಯಾಗಿದ್ದು, ಈ ಪೈಕಿ 4,242 ಕ್ರಮಬದ್ಧವಾಗಿವೆ. ಒಟ್ಟು 116 ನಾಮಪತ್ರ ತಿರಸ್ಕೃತಗೊಂಡಿವೆ.
ಬೆಳ್ತಂಗಡಿ ತಾಲೂಕಿನಲ್ಲಿ ಸಲ್ಲಿಕೆಯಾದ 1,729 ನಾಮಪತ್ರಗಳ ಪೈಕಿ 1,676 ಕ್ರಮಬದ್ಧವಾಗಿವೆ. ಪುತ್ತೂರು-969ರಲ್ಲಿ 936 ಕ್ರಮಬದ್ಧ, ಸುಳ್ಯ-850ರಲ್ಲಿ 831 ಕ್ರಮಬದ್ಧ, ಕಡಬ-808ರ ಪೈಕಿ 799 ನಾಮಪತ್ರಗಳು ಕ್ರಮಬದ್ಧವಾಗಿವೆ. ಶುಕ್ರವಾರ ನಾಮಪತ್ರ ವಾಪಸ್‌ಗೆ ಕೊನೆಯ ದಿನವಾಗಿದೆ.
ಜಿಲ್ಲೆಯಲ್ಲಿ ಒಟ್ಟು 3,222 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಮೊದಲ ಹಂತದಲ್ಲಿ 1,681 ಸ್ಥಾನಗಳಿಗೆ ಮತ್ತು ದ್ವಿತೀಯ ಹಂತದಲ್ಲಿ 1,541 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ ಎಂದು ಜಿಲ್ಲಾಧಿಕಾರಿಯ ಪ್ರಕಟನೆ ತಿಳಿಸಿದೆ.
Next Story





