ಬೆಂಗಳೂರು: ಡೇಟಿಂಗ್ ಆ್ಯಪ್ ಮೂಲಕ 16 ಲಕ್ಷ ರೂ. ಕಳೆದುಕೊಂಡ ಟೆಕ್ಕಿ

ಸಾಂದರ್ಭಿಕ ಚಿತ್ರ
ಬೆಂಗಳೂರು,ಡಿ.18: ಡೇಟಿಂಗ್ ಆ್ಯಪ್ ಮೂಲಕ ಪರಿಚಯವಾಗಿ, 16 ಲಕ್ಷ ರೂ. ದೋಚಿದ್ದಾರೆಂದು ವ್ಯಕ್ತಿಯೋರ್ವರು ಪೊಲೀಸರಲ್ಲಿ ದೂರು ನೀಡಿದ ಘಟನೆಯು ಬೆಂಗಳೂರಿನಲ್ಲಿ ನಡೆದಿದೆ. ವ್ಯಕ್ತಿಯು ವೃತ್ತಿಯಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದು, ಡೇಟಿಂಗ್ ಆ್ಯಪ್ ಮೂಲಕ ಪರಿಚಯವಾದ ಶ್ವೇತಾ ಎಂಬಾಕೆಗೆ ಮೊದಲು 2,000ರೂ. ಪಾವತಿಸಿದ್ದರು ಎನ್ನಲಾಗಿದೆ.
ಬಳಿಕ ಆಕೆ ತನ್ನ ಸ್ನೇಹಿತೆಯ ನಂಬರ್ ಅನ್ನೂ ನೀಡಿದ್ದು, ಆಕೆ ಈತನೊಂದಿಗೆ ನಡೆಸಿದ್ದ ವೀಡಿಯೋ ಕಾಲ್ ಅನ್ನು ರೆಕಾರ್ಡ್ ಮಾಡಿದ್ದಳು ಎನ್ನಲಾಗಿದೆ. ಖಾಸಗಿ ವೀಡಿಯೋ ಕಾಲ್ ಅನ್ನು ವೈರಲ್ ಮಾಡುತ್ತೇನೆಂದು ಹೆದರಿಸಿ ಡಿ.3ರಿಂದ ಡಿ.13ರ ನಡುವೆ ಒಟ್ಟು 16 ಲಕ್ಷ ರೂ.ಯನ್ನು ವಸೂಲಿ ಮಾಡಿದ್ದಾರೆಂದು ಪ್ರಕರಣದಲ್ಲಿ ಉಲ್ಲೇಖಿಸಲಾಗಿದೆ. ಒಟ್ಟು ನಾಲ್ವರು ಯುವತಿಯರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು. ಆರೋಪಿಗಳಿಗಾಗಿ ಹುಡುಕಾಟ ನಡೆಯುತ್ತಿದೆ ಎಂದು timesofindia.com ವರದಿ ಮಾಡಿದೆ.
Next Story





