ಕೊಣಾಜೆ: ಪೊಲೀಸ್ ಕಾನ್ ಸ್ಟೇಬಲ್ ನಾಪತ್ತೆ
![ಕೊಣಾಜೆ: ಪೊಲೀಸ್ ಕಾನ್ ಸ್ಟೇಬಲ್ ನಾಪತ್ತೆ ಕೊಣಾಜೆ: ಪೊಲೀಸ್ ಕಾನ್ ಸ್ಟೇಬಲ್ ನಾಪತ್ತೆ](https://www.varthabharati.in/sites/default/files/images/articles/2020/12/18/271682-1608273862.gif)
ಕೊಣಾಜೆ, ಡಿ.18: ಕೆಎಸ್ ಆರ್ ಪಿ ಪೊಲೀಸ್ ಕಾನ್ ಸ್ಟೇಬಲ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಯುವಕನೋರ್ವ ಕೊಣಾಜೆ ಅಸೈಗೋಳಿಯ ಪೊಲೀಸ್ ವಸತಿ ಗೃಹದಿಂದ ನಾಪತ್ತೆಯಾಗಿರುವ ಬಗ್ಗೆ ಕೊಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಸೈಗೋಳಿಯ ಕರ್ನಾಟಕ ಮೀಸಲು ಪೊಲೀಸ್ ಪಡೆಯ ಏಳನೇ ಬೆಟಾಲಿಯನ್ ನ ಕಾನ್ ಸ್ಟೇಬಲ್ ಅನಿಲ್ ಕುಮಾರ್ (29) ನಾಪತ್ತೆಯಾದವರು.
ಚಿಕ್ಕಮಗಳೂರು ಜಿಲ್ಲೆ ಮೂಲದವರಾಗಿರುವ ಅನಿಲ್ ತಾಯಿ, ಪತ್ನಿಯೊಂದಿಗೆ ಅಸೈಗೋಳಿಯ ಪೊಲೀಸ್ ವಸತಿಗೃಹದಲ್ಲಿ ವಾಸವಾಗಿದ್ದರು.
ಗುರುವಾರ ಸಂಜೆಯಿಂದ ಅವರು ನಾಪತ್ತೆಯಾಗಿದ್ದು, ಈ ಬಗ್ಗೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕೌಟುಂಬಿಕ ಕಲಹದ ಕಾರಣದಿಂದ ಬೇಸತ್ತು ಅವರು ನಾಪತ್ತೆಯಾಗಿರಬಹುದು ಎಂದು ಸಂಶಯಿಸಲಾಗಿದೆ.
Next Story