ಯುಜಿನೀಟ್ 2020 ವೈದ್ಯಕೀಯ ಕೋರ್ಸು ಸೀಟು ಹಂಚಿಕೆ
ಬೆಂಗಳೂರು, ಡಿ.18: ವೈದ್ಯಕೀಯ ಕೋರ್ಸುಗಳ ಪ್ರವೇಶಕ್ಕಾಗಿ Mop-up ಸುತ್ತಿನ ಸೀಟು ಹಂಚಿಕೆಯನ್ನು ಪ್ರಾಧಿಕಾರದ ವೆಬ್‍ಸೈಟಿನಲ್ಲಿ ಈಗಾಗಲೆ ಪ್ರಕಟಿಸಿರುವ ವೇಳಾಪಟ್ಟಿಯಂತೆ ಡಿ.18 ರಿಂದ 22ರವರೆಗೆ ನಡೆಸಲಾಗುವುದು. ಕಾಲೇಜುವಾರು, ಕೋರ್ಸುವಾರು ಮತ್ತು ಪ್ರವರ್ಗವಾರು ಲಭ್ಯವಿರುವ ಸೀಟುಗಳ ಮಾಹಿತಿಯನ್ನು ಹಾಗೂ ಶುಲ್ಕದ ವಿವರಗಳನ್ನು ಪ್ರಾಧಿಕಾರದ ವೆಬ್‍ಸೈಟಿನಲ್ಲಿ ಪ್ರಕಟಿಸಲಾಗಿದೆ.
ಅರ್ಹ ಹಾಗೂ ಆಸಕ್ತಿ ಇರುವ ಅಭ್ಯರ್ಥಿಗಳು ಎ) ಎಂಟ್ರಿ ಪಾಸ್(ಪ್ರವೇಶ ಪಾಸ್), ಬಿ) ವೆರಿಫಿಕೇಷನ್ ಸ್ಲಿಪ್(ಪರಿಶೀಲನಾ ಸ್ಲಿಪ್), ಸಿ) ಡಿಮಾಂಡ್ ಡ್ರಾಫ್ಟ್(ಡಿ.ಡಿ.), ಡಿ) ಒರಿಜಿನಲ್ ಡಾಕ್ಯುಮೆಂಟ್(ಮೂಲ ದಾಖಲಾತಿಗಳು)ಗಳೊಂದಿಗೆ Mop-up ಸುತ್ತಿನಲ್ಲಿ ವೇಳಾಪಟ್ಟಿಯಂತೆ ಭಾಗವಹಿಸಬಹುದಾಗಿದೆ. ಹೆಚ್ಚಿನ ವಿವರಗಳಿಗೆ ಅಭ್ಯರ್ಥಿಗಳು ಪ್ರಾಧಿಕಾರದ ವೆಬ್‍ಸೈಟ್ http://kea.kar.nic.in ಅನ್ನು ನೋಡಬಹುದು.
ದಂತ ವೈದ್ಯಕೀಯ Mop-up ಸುತ್ತನ್ನು ಡಿ.23 ಮತ್ತು 24ರಂದು ನಡೆಸಲಾಗುವುದು ಹಾಗೂ ವೇಳಾಪಟ್ಟಿಯನ್ನು ಸದ್ಯದಲ್ಲಿಯೆ ಪ್ರಾಧಿಕಾರದ ವೆಬ್‍ಸೈಟಿನಲ್ಲಿ ಪ್ರಕಟಿಸಲಾಗುವುದು ಎಂದು ರಾಜ್ಯ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕರ ಪ್ರಕಟಣೆ ತಿಳಿಸಿದೆ.





