ವಾಹನ ಢಿಕ್ಕಿ; ಸ್ಕೂಟಿ ಚಾಲಕ ಮೃತ್ಯು
ಹಿರಿಯಡ್ಕ, ಡಿ.18: ಮಹೀಂದ್ರ ಮಕ್ಸಿಮಾ ಡಿಕ್ಕಿ ಹೊಡೆದು ಸ್ಕೂಟಿ ಸವಾರ ಮೃತಪಟ್ಟ ಘಟನೆ ದೊಡ್ಡಣ್ಣಗುಡ್ಡೆ ಕ್ರಾಸ್ ಬಳಿ ಗುರುವಾರ ಸಂಜೆ 5:30ರ ಸುಮಾರಿಗೆ ನಡೆದಿದೆ.
ಬೆಳ್ಳಂಪಳ್ಳಿಯ ಸತೀಶ್ ಕುಲಾಲ (46) ಎಂಬವರು ಕುಕ್ಕೆಹಳ್ಳಿ ಕಡೆಯಿಂದ ಸ್ಕೂಟಿಯಲ್ಲಿ ಬರುತ್ತಿರುವಾಗ ವೇಗವಾಗಿ ಬಂದ ವಾಹನ ಹಿಂದಿನಿಂದ ಡಿಕ್ಕಿ ಹೊಡೆದಿತ್ತು. ಇದರಿಂದ ರಸ್ತೆಗೆ ಬಿದ್ದ ಸತೀಶ್ ಕುಲಾಲ್‌ರನ್ನು ಕೂಡಲೇ ಮಣಿಪಾಲ ಕೆಎಂಸಿಗೆ ಸೇರಿಸಿದರೂ, ಚಿಕಿತ್ಸೆ ಫಲಕಾರಿಯಾಗದೇ ಅವರು ಇಂದು ಮುಂಜಾನೆ ಮೃತಪಟ್ಟರು.
ಈ ಬಗ್ಗೆ ಹಿರಿಯಡ್ಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





