ಎಐಸಿಸಿ ಕಾರ್ಯದರ್ಶಿಯಾಗಿ ಪಿವಿ ಮೋಹನ್ ನೇಮಕ
![ಎಐಸಿಸಿ ಕಾರ್ಯದರ್ಶಿಯಾಗಿ ಪಿವಿ ಮೋಹನ್ ನೇಮಕ ಎಐಸಿಸಿ ಕಾರ್ಯದರ್ಶಿಯಾಗಿ ಪಿವಿ ಮೋಹನ್ ನೇಮಕ](https://www.varthabharati.in/sites/default/files/images/articles/2020/12/19/271846-1608393649.jpg)
ಮಂಗಳೂರು, ಡಿ. 19: ಕೆಪಿಸಿಸಿ ಕಾರ್ಯದರ್ಶಿಯಾಗಿದ್ದ ಮಾಜಿ ಪತ್ರಕರ್ತ ಪಿ.ವಿ.ಮೋಹನ್ ಅವರನ್ನು ಎಐಸಿಸಿ ಕಾರ್ಯದರ್ಶಿಯಾಗಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ನೇಮಕಗೊಳಿಸಿದ್ದಾರೆ. ಅಲ್ಲದೆ ಕೇರಳದ ಉಸ್ತುವಾರಿಯನ್ನಾಗಿಯೂ ನೇಮಕಗೊಳಿಸಲಾಗಿದೆ.
ಸಾಮಾಜಿಕ ಹೋರಾಟಗಾರರಾಗಿಯೂ ಗುರುತಿಸಿಕೊಂಡಿದ್ದ ಪಿ.ವಿ.ಮೋಹನ್ ಈ ಹಿಂದೆ ಎಐಸಿಸಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ಪಕ್ಷದ ವಕ್ತಾರರಾಗಿ, ಚುನಾವಣೆಗಳ ವೀಕ್ಷಕರಾಗಿ, ಉಸ್ತುವಾರಿಯಾಗಿ ಕಾರ್ಯನಿರ್ವಹಿಸಿದ್ದರು.
Next Story