ಭಾರತ-ಆಸ್ಟ್ರೇಲಿಯಾ ಸರಣಿಯಿಂದ ಮುಹಮ್ಮದ್ ಶಮಿ ಔಟ್

ಅಡಿಲೇಡ್,ಡಿ.19: ಭಾರತ-ಆಸ್ಟ್ರೇಲಿಯಾ ಕ್ರಿಕೆಟ್ ಸರಣಿಯಿಂದ ಭಾರತೀಯ ಕ್ರಿಕೆಟ್ ತಂಡದ ವೇಗದ ಬೌಲರ್ ಮುಹಮ್ಮದ್ ಶಮಿ ಹೊರಗುಳಿಯಲಿದ್ದಾರೆಂದು ANI ಸುದ್ದಿಸಂಸ್ಥೆ ವರದಿ ಮಾಡಿದೆ. ಇಂದಿನ ಪಂದ್ಯಾಟದಲ್ಲಿ ಬ್ಯಾಟಿಂಗ್ ವೇಳೆ ವೇಗವಾಗಿ ಬಂದ ಚೆಂಡು ಕೈಗೆ ಅಪ್ಪಳಿಸಿದ ಕಾರಣ ತೀವ್ರವಾದ ನೋವುಂಟಾಗಿದ್ದು, ಸರಣಿಯಿಂದ ಹೊರಗುಳಿದು ಚಿಕಿತ್ಸೆಗೆ ವಿಧೇಯರಾಗಲಿದ್ದಾರೆ ಎಂದು ತಿಳಿದು ಬಂದಿದೆ.
ಎರಡನೇ ಇನ್ನಿಂಗ್ಸ್ ನಲ್ಲಿ ಶಮಿ ಬ್ಯಾಟಿಂಗ್ ಮಾಡುತ್ತಿದ್ದ ವೇಳೆ ಆಸ್ಟ್ರೇಲಿಯಾ ವೇಗಿ ಪ್ಯಾಟ್ ಕಮ್ಮಿನ್ಸ್ ಎಸೆದ ಎಸೆತವೊಂದು ಕೈಗೆ ಅಪ್ಪಳಿಸಿತ್ತು. ಪಂದ್ಯಾಟ ಮುಗಿದ ಬಳಿಕ ಈ ಕುರಿತು ಮಾತನಾಡಿದ ವಿರಾಟ್ ಕೊಹ್ಲಿ, “ಮುಹಮ್ಮದ್ ಶಮಿ ಕೈಗೆ ಚೆಂಡುಬಡಿದಿರುವ ಕಾರಣ ತೀವ್ರವಾದ ನೋವಿನಿಂದ ಬಳಲುತ್ತಿದ್ದಾರೆ. ಅವರಿಗೆ ಕೈಯನ್ನುಮೇಲಕ್ಕೆತ್ತಲು ಕೂಡಾ ಸಾಧ್ಯವಾಗುತ್ತಿಲ್ಲ. ಸದ್ಯ ಸ್ಕ್ಯಾನಿಂಗ್ ನಡೆಸಲಾಗುತ್ತಿದ್ದು, ಸಂಜೆಯ ವೇಳೆ ಸಂಪೂರ್ಣ ಮಾಹಿತಿ ದೊರಕಲಿದೆ” ಎಂದು ಹೇಳಿಕೆ ನೀಡಿದ್ದಾರೆ.
ತೀವ್ರವಾದ ನೋವಿನಿಂದ ಶಮಿ ಬಳಲುತ್ತಿರುವ ಕಾರಣ ಅವರು ಮುಂದಿನ ಪಂದ್ಯಗಳಿಗೆ ಅಲಭ್ಯವಾಗಲಿದ್ದಾರೆಂದು ani ಸುದ್ದಿಸಂಸ್ಥೆ ತನ್ನ ವರದಿಯಲ್ಲಿ ತಿಳಿಸಿದೆ





