ಮಂಗಳೂರು: ಬಾಗಲಕೋಟೆ ಮೂಲದ ಯುವತಿ ನಾಪತ್ತೆ
ಮಂಗಳೂರು, ಡಿ.19: ನಗರ ವ್ಯಾಪ್ತಿಯಲ್ಲೇ ವಾಸವಾಗಿದ್ದ ಯುವತಿ ನಾಪತ್ತೆಯಾದ ಬಗ್ಗೆ ಮಂಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೂಲತಃ ಬಾಗಲಕೋಟೆ, ಪ್ರಸ್ತುತ ತಣ್ಣೀರುಬಾವಿ ನಿವಾಸಿ ಪವಿತ್ರಾ (21)ನಾಪತ್ತೆಯಾದ ಯುವತಿ
ಇವರು ಡಿ.16ರಂದು ಬೆಳಗ್ಗೆ 8 ಗಂಟೆಗೆ ಕೂಳೂರಿನಲ್ಲಿರುವ ಸಂಬಂಧಿಕರ ಮನೆಗೆ ತೆರಳುವುದಾಗಿ ಹೇಳಿ ಹೋದವರು ವಾಪಸಾಗದೇ ನಾಪತ್ತೆಯಾಗಿದ್ದಾರೆ.
ಚಹರೆ: 4.5 ಅಡಿ ಎತ್ತರ, ಬಿಳಿ ಮೈಬಣ್ಣ, ಸಾಧಾರಣ ಶರೀರ ಹೊಂದಿದ್ದಾರೆ. ಕನ್ನಡ ಭಾಷೆ ಮಾತನಾಡುತ್ತಾರೆ. ಮಾಹಿತಿ ದೊರೆತವರು ಮಹಿಳಾ ಠಾಣೆ ಸಂಪರ್ಕಿಸುವಂತೆ ಪೊಲೀಸರು ತಿಳಿಸಿದ್ದಾರೆ.
Next Story





