ಅಕ್ರಮ ಮರ ಸಾಗಾಟ: ಆರೋಪಿ ಪೊಲೀಸ್ ವಶಕ್ಕೆ

ಉಪ್ಪಿನಂಗಡಿ : ಇಲ್ಲಿಗೆ ಸಮೀಪದ ಶಿರಾಡಿ ಗ್ರಾಮದ ಗುಂಡ್ಯ ಎಂಬಲ್ಲಿ ಅಕ್ರಮವಾಗಿ ಮರವನ್ನು ಸಾಗಾಟ ಮಾಡಲಾಗುತ್ತಿದ್ದ ಪ್ರಕರಣವನ್ನು ಪತ್ತೆ ಹಚ್ಚಿದ ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿಗಳ ತಂಡ ಆರೋಪಿ ಸಹಿತ ಮರ ಸಾಗಾಟ ಮಾಡಲಾಗುತ್ತಿದ್ದ ಲಾರಿಯನ್ನು ವಶಪಡಿಸಿಕೊಂಡ ಘಟನೆ ಶನಿವಾರ ನಡೆದಿದೆ.
ಸಕಲೇಶ್‍ಪುರದ ನಿವಾಸಿ ಉಣ್ಣಿಕೃಷ್ಣನ್ ಬಂಧಿತ ಆರೋಪಿಯಾಗಿದ್ದು, ಆತ ಸಕಲೇಶಪುರದಿಂದ ಮಂಗಳೂರಿನತ್ತ ಸಾಗಿಸುತ್ತಿದ್ದ ಸುಮಾರು ಒಂದು ಲಕ್ಷ ರೂಪಾಯಿಗೂ ಮಿಗಿಲಾದ ಬೆಲೆ ಬಾಳುವ ಮರವನ್ನು ಮತ್ತು ಸಾಗಾಟಕ್ಕೆ ಬಳಸಿದ್ದ ಲಾರಿಯನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕಾರ್ಯಾಚರಣೆಯಲ್ಲಿ ಕೊಕ್ಕಡ ಶಾಖೆಯ ಉಪವಲಯ ಅರಣ್ಯಾಧಿಕಾರಿ ಕೆ ಆರ್ ಅಶೋಕ್, ಬಂದಾರು ಶಾಖೆಯ ಉಪ ವಲಯ ಅರಣ್ಯಾಧಿಕಾರಿ ರಾಯಣ್ಣ ಗೌಡ ಪಾಟೀಲ್, ಅರಣ್ಯ ವೀಕ್ಷಕ ರಸೂಲ್ ಸಾಬ್ ಸಕಾನದಗಿ, ನಾಗಲಿಂಗ ಬಡಿಗೇರ, ದಿನೇಶ್, ವಾಹನ ಚಾಲಕ ರವಿ ಭಾಗವಹಿಸಿದ್ದರು.
ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿ ಮಧುಸೂಧನ್ ತನಿಖೆ ನಡೆಸುತ್ತಿದ್ದಾರೆ.
Next Story





