ಮಂಗಳೂರು-ದೇರಳಕಟ್ಟೆಯಿಂದ ಎರ್ನಾಕುಲಂಗೆ ಕ್ಲಬ್ ಕ್ಲಾಸ್ ವೋಲ್ವೋ ಬಸ್ ಪ್ರಾರಂಭ
ಮಂಗಳೂರು, ಡಿ.19: ಕರಾರಸಾ ನಿಗಮದ ವತಿಯಿಂದ ಮಂಗಳೂರು ಬಸ್ ನಿಲ್ದಾಣದಿಂದ ದೇರಳಕಟ್ಟೆ ಮಾರ್ಗವಾಗಿ ಎರ್ನಾಕುಲಂಗೆ ಹೋಗುವ ವೋಲ್ವೋ ವಾಹನವನ್ನು ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಶುಕ್ರವಾರದಿಂದ ಆರಂಭಿಸಲಾಗಿದೆ ಎಂದು ಮಂಗಳೂರು ಕರಾರಸಾಸಂ ವಿಭಾಗೀಯ ನಿಯಂತ್ರಣಾಧಿಕಾರಿಯ ಪ್ರಕಟನೆ ತಿಳಿಸಿದೆ.
ಸಾರಿಗೆ ಕಾರ್ಯಾಚರಣೆಯ ವಿವರ: ಕ್ಲಬ್ ಕ್ಲಾಸ್ ವೋಲ್ವೋ ಮಂಗಳೂರಿನಿಂದ ರಾತ್ರಿ 9 ಗಂಟೆಗೆ ಹೊರಟು 9:25ಕ್ಕೆ ದೇರಳಕಟ್ಟೆ ಮಾರ್ಗವಾಗಿ ಎರ್ನಾಕುಲಂಗೆ ಬೆಳಿಗ್ಗೆ 5 ಗಂಟೆಗೆ ತಲುಪಲಿದೆ. (ವಯಾ ಕಾಸರಗೋಡು, ಕ್ಯಾಲಿಕಟ್, ತ್ರಿಶ್ಯೂರ್, ಅಳಪೆ), ಎರ್ನಾಕುಲಂನಿಂದ ರಾತ್ರಿ 8:30 ಕ್ಕೆ ಹೊರಟು 5:35ಕ್ಕೆ ಮಂಗಳೂರು ತಲುಪಲಿದೆ.
ಸಾರಿಗೆಗಳಿಗೆ ಆನ್ಲೈನ್ ಮುಂಗಡ ಟಿಕೆಟ್ ಬುಕ್ಕಿಂಗ್ ಸೌಲಭ್ಯ ಕಲ್ಪಿಸಲಾಗಿದ್ದು www.ksrtc.inಗೆ ಅಥವಾ ಹತ್ತಿರದ ರಿಸರ್ವೇಶನ್ ಕೌಂಟರ್ ಸಂಪರ್ಕಿಸಬಹುದಾಗಿದೆ.
Next Story