ಸುಳ್ಯ: ಆಸ್ಪತ್ರೆಯ ಕಟ್ಟಡದಿಂದ ಹಾರಿ ವೃದ್ಧ ಆತ್ಮಹತ್ಯೆ
ಹಲ್ಲೆ ನಡೆಸಿದ್ದ ಪುತ್ರ; ಆರೋಪ

ಸುಳ್ಯ: ಮಗನಿಂದ ಹಲ್ಲೆಗೊಳಗಾಗಿ ಸುಳ್ಯದ ಕೆವಿಜಿ ಆಸ್ಪತ್ರೆಗೆ ದಾಖಲಾಗಿದ್ದ ಬಂದಡ್ಕದ ಲಕ್ಷ್ಮಣ ಗೌಡ (69) ಆಸ್ಪತ್ರೆಯ 2ನೇ ಮಹಡಿಯಿಂದ ಹಾರಿ ಬಿದ್ದು ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ.
ಕಾಸರಗೋಡು ಬಂದಡ್ಕದ ಬಿಲ್ಲರಮಜಲು ನಿವಾಸಿ ಲಕ್ಷ್ಮಣ ಗೌಡರಿಗೂ ಅವರ ಮಗನಿಗೂ ಹೊಡೆದಾಟವಾಗಿ ಮಗ ತಂದೆಗೆ ಅಡಿಕೆ ಸಲಾಕೆಯಿಂದ ಹೊಡೆದಿದ್ದನೆನ್ನಲಾಗಿದೆ. ಇದರಿಂದ ಗಾಯಗೊಂಡಿದ್ದ ಲಕ್ಷ್ಮಣ ಗೌಡರನ್ನು ಚಿಕಿತ್ಸೆಗಾಗಿ ಸುಳ್ಯ ಕೆ.ವಿ.ಜಿ. ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯಲ್ಲಿ ತನ್ನ ಜತೆಗಿದ್ದ ಅಳಿಯ ಊಟ ತರಲೆಂದು ವಾರ್ಡಿನಿಂದ ಹೊರಗೆ ಹೋಗಿದ್ದಾಗ ಲಕ್ಷ್ಮಣ ಗೌಡರು ಹೊರಗೆ ಬಂದು ಕೆಳಕ್ಕೆ ಹಾರಿ ತೀವ್ರವಾಗಿ ಗಾಯಗೊಂಡು ಸಾವನ್ನಪ್ಪಿದ್ದರೆನ್ನಲಾಗಿದೆ.
ಮಾನಸಿಕ ಅಸ್ವಸ್ಥರಂತೆ ವರ್ತಿಸುತ್ತಿದ್ದ ತನ್ನ ಮಗ ಹಾಗೂ ಸೊಸೆಯ ಕಾರಣ ಗಲಾಟೆಯಾಗಿ ಮನನೊಂದು ಕಟ್ಟಡದಿಂದ ಕೆಳಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಲಕ್ಷ್ಮಣ ಗೌಡರ ಪತ್ನಿ ಲಲಿತಾ ಸುಳ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
Next Story





