ಹಿರಿಯ ನಾಗರಿಕರ ವೇದಿಕೆ ಕಚೇರಿಗೆ ಸರಕಾರಿ ನಿವೇಶನ ಮಂಜೂರಾತಿಗೆ ಆಗ್ರಹ

ಬೈಂದೂರು, ಡಿ.20: ಬೈಂದೂರು ತಾಲೂಕು ಹಿರಿಯ ನಾಗರಿಕರ ವೇದಿಕೆಯ ಕಚೇರಿ ನಿರ್ವಹಣೆ ಹಾಗೂ ಹಿರಿಯ ನಾಗರಿಕರ ಪರ ಚಟುವಟಿಕೆ ವಿಸ್ತರಣೆ ಮಾಡುವುದಕ್ಕೆ ಸೂಕ್ತ ಸರಕಾರಿ ನಿವೇಶನ ಸ್ಥಳ ಮಂಜೂರು ಮಾಡಬೇಕು ಎಂದು ಹಿರಿಯ ನಾಗರಿಕ ವೇದಿಕೆ ಅಧ್ಯಕ್ಷ ಗೋವಿಂದ ಎಂ. ಜಿಲ್ಲಾಡಳಿತವನ್ನು ಆಗ್ರಹಿಸಿದರು.
ಬೈಂದೂರು ತಾಲೂಕು ಹಿರಿಯ ನಾಗರಿಕರ ವೇದಿಕೆಯ ಆಶ್ರಯದಲ್ಲಿ ಡಿ.19ರಂದು ಮಹಾಕಾಳಿ ದೇವಸ್ಥಾನದ ಸಭಾಂಗಣದಲ್ಲಿ ಜರಗಿದ ಮಾಸಿಕ ಸರ್ವ ಸದಸ್ಯರ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.
ನಿವೃತ್ತ ಅಧ್ಯಾಪಕ ಹಿರಿಯ ನಾಗರಿಕ ಜಿ.ತಿಮ್ಮಪ್ಪಯ್ಯ ಬೈಂದೂರು ಮನೋ ರಂಜನಾ ಕಾರ್ಯಕ್ರಮ ನೀಡಿದರು. ನೂತನ ಸದಸ್ಯ ರಿಸವರ್ ಬ್ಯಾಂಕ್ ನಿವೃತ್ತ ಎಜಿಎಂ ಪ್ರೆಮಾನಂದ ತಗ್ಗರ್ಸೆ ಅವರನ್ನು ಗೌರವಿಸಲಾಯಿತು. ವೇದಿಕೆ ಕಾರ್ಯ ದರ್ಶಿ ಸಂಜೀವ ಆಚಾರ್ಯ ಕಳವಾಡಿ ಚಟುವಟಿಕೆ ವರದಿಯನ್ನು ಮಂಡಿಸಿ ದರು. ಉಪಾಧ್ಯ ಶ್ರೀನಿವಾಸ ಪಡುವರಿ ವಂದಿಸಿದರು.
Next Story





