ಎರಡನೆ ಹಂತದ ಉಡುಪಿ ಗ್ರಾಪಂ ಚುನಾವಣೆ: ಅಂತಿಮ ಕಣದಲ್ಲಿ 2708 ಮಂದಿ
ಉಡುಪಿ, ಡಿ.20: ಉಡುಪಿ ಜಿಲ್ಲೆಯಲ್ಲಿ ಡಿ.27ರಂದು ನಡೆಯಲಿರುವ ಎರಡನೆ ಹಂತದ ಗ್ರಾಪಂ ಚುನಾವಣೆಗೆ ನಾಮಪತ್ರ ಸಲ್ಲಿಸಿದವರ ಪೈಕಿ ಒಟ್ಟು 2708 ಮಂದಿ ಅಂತಿಮವಾಗಿ ಕಣದಲ್ಲಿದ್ದಾರೆ.
ಜಿಲ್ಲೆಯ ಒಟ್ಟು 86 ಗ್ರಾಮ ಪಂಚಾಯತಿಗಳ ಒಟ್ಟು 1243 ಸ್ಥಾನಗಳ ಪೈಕಿ ಚುನಾವಣೆ ನಡೆಯಲಿರುವ 1178 ಸ್ಥಾನಗಳಿಗೆ 1458 ಪುರುಷರು ಹಾಗೂ 1250 ಮಹಿೆಯರು ಕಣದಲ್ಲಿ ಉಳಿದುಕೊಂಡಿದ್ದಾರೆ.
ಕುಂದಾಪುರ ತಾಲೂಕಿನ 43 ಗ್ರಾಪಂಗಳ 530 ಸ್ಥಾನಗಳಿಗೆ 1262 (ಪುರುಷ- 689, ಮಹಿಳೆ-573), ಕಾರ್ಕಳ ತಾಲೂಕಿನ 27 ಗ್ರಾಪಂಗಳ 368 ಸ್ಥಾನಗಳಿಗೆ 796(ಪುರುಷ- 419, ಮಹಿಳೆ-377), ಕಾಪು ತಾಲೂಕಿನ 16 ಗ್ರಾಪಂಗಳ 280 ಸ್ಥಾನಗಳಿಗೆ 650(ಪುರುಷ- 350, ಮಹಿಳೆ-300) ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಇದರಲ್ಲಿ ಪರಿಶಿಷ್ಟ ಜಾತಿ-223(ಪು-46, ಮ-177), ಪರಿಶಿಷ್ಟ ಪಂಗಡ- 165(13, 152), ಹಿಂದುಳಿದ ಅ ವರ್ಗ- 641(ಪು-306, ಮ-335), ಹಿಂದುಳಿದ ಬಿ ವರ್ಗ-152(ಪು-75, ಮ-77), ಸಾಮಾನ್ಯ-1527 (ಪು-1018, ಮ-509) ಮಂದಿ ಕಣದಲ್ಲಿದ್ದಾರೆ ಎಂದು ಜಿಲ್ಲಾಡಳಿತದ ಪ್ರಕಟಣೆ ತಿಳಿಸಿದೆ.
65 ಮಂದಿ ಅವಿರೋಧ ಆಯ್ಕೆ
ಜಿಲ್ಲೆಯ ಎರಡನೇ ಹಂತದ ಗ್ರಾಪಂ ಚುನಾವಣೆಯಲ್ಲಿ ಒಟ್ಟು 65 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಕುಂದಾಪುರ ತಾಲೂಕಿನ 24 ಮಂದಿ, ಕಾರ್ಕಳದ ತಾಲೂಕಿನ 31 ಮಂದಿ ಹಾಗೂ ಕಾಪು ತಾಲೂಕಿನ 10 ಸದಸ್ಯರು ಸೇರಿದಂತೆ ಒಟ್ಟು 65 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಮತಗಟ್ಟೆ ಅಧಿಕಾರಿಗಳು
ಉಡುಪಿ ತಾಲೂಕಿನ 161 ಮತಗಟ್ಟೆಗಳಿಗೆ ಒಟ್ಟು 708, ಕುಂದಾಪುರ 271 ಮತಗಟ್ಟೆಗಳಿಗೆ 1192, ಕಾರ್ಕಳ 193 ಮತಗಟ್ಟೆಗಳಿಗೆ 848, ಬೈಂದೂರು 128 ಮತಗಟ್ಟೆಗಳಿಗೆ 564, ಕಾಪು 142 ಮತಗಟ್ಟೆಗಳಿಗೆ 624, ಹೆಬ್ರಿ 62 ಮತಗಟ್ಟೆಗಳಿಗೆ 272, ಬ್ರಹ್ಮಾವರ 209 ಮತಗಟ್ಟೆ ಗಳಿಗೆ 920 ಅಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಜಿಲ್ಲೆಯಲ್ಲಿ ಗ್ರಾಪಂ ಮೊದಲನೇ ಹಂತದ ಚುನಾವಣೆ ಪ್ರಯುಕ್ತ ನಾಳೆ ಬೆಳಗ್ಗೆ 9ಗಂಟೆಯಿಂದ ಬ್ರಹ್ಮಗಿರಿ ಸಂತ ಸಿಸಿಲೀಸ್ ವಿದ್ಯಾಸಂಸ್ಥೆ, ಹೆಬ್ರಿ ಸರಕಾರಿ ಪ್ರಥಮ ದರ್ಜೆ ಕಾಲೇಜು, ಬೈಂದೂರು ಸರಕಾರಿ ಪದವಿ ಪೂರ್ವ ಕಾಲೇಜು, ಬ್ರಹ್ಮಾವರ ಎಸ್.ಎಂ.ಎಸ್. ಪದವಿ ಪೂರ್ವ ಕಾಲೇಜು ಗಳಲ್ಲಿ ಮಸ್ಟರಿಂಗ್ ನಡೆಯಲಿದೆ.







