ಜಪ್ಪು ಸದ್ಭಾವನ ವೇದಿಕೆಯಿಂದ ಸೌಹಾರ್ದ ಕೂಟ

ಮಂಗಳೂರು, ಡಿ. 20: ನಗರದ ಜಪ್ಪು ವರ್ತುಲದ ಸದ್ಭಾವನ ವೇದಿಕೆಯ ವತಿ ಯಿಂದ ಇಂದು ಕಾಸಿಯಾಚರ್ಚ್ ಸಭಾಂಗಣದಲ್ಲಿ ಹಮ್ಮಿ ಕೊಂಡ ದೀಪಾವಳಿ, ಕ್ರಿಸ್ಮಸ್ ಹಾಗೂ ಈದ್ ಸೌಹಾರ್ದ ಕೂಟ ನಡೆಯಿತು.
ಈ ಕಾರ್ಯಕ್ರಮ ದಲ್ಲಿ ರಾಜ್ಯ ಜಾನಪದ ಹಾಗೂ ಯಕ್ಷಗಾನ ಅಕಾಡೆಮಿಯ ಮಾಜಿ ಸದಸ್ಯ ಭಾಸ್ಕರ ರೈ ಕುಕ್ಕುವಳ್ಳಿ ಮಾತನಾ ಡುತ್ತಾ ಪರಸ್ಪರ ಒಬ್ಬರನ್ನೊಬ್ಬರು ಅರಿತು ಕೊಂಡಾಗ ಸೌಹಾರ್ದ ಸಮಾಜ ನಿರ್ಮಾಣ ಸಾಧ್ಯ. ವಿವಿಧ ಧರ್ಮಗಳ ಮಹಾತ್ಮರು ಸಮಾಜಕ್ಕಾಗಿ ಬದುಕಿದವರ ಆದರ್ಶಗಳು ನಮಗೆ ದಾರಿ ದೀಪವಾಗಬೇಕಾಗಿದೆ. ಮನುಷ್ಯ ಮನುಷ್ಯ ರು ಪ್ರೀತಿಯಿಂದ ಒಂದು ಗೂಡಿ ಬದುಕುವುದು ಹಬ್ಬಗಳ ಆದರ್ಶ ವಾಗಬೇಕು ಎಂದು ಶುಭಹಾರೈಸಿದರು.
ಕಾಸಿಯಾ ಚರ್ಚ್ ನ ಧರ್ಮ ಗುರುಗಳಾದ ವಂ.ಎರಿಕ್ ಕ್ರಾಸ್ತಾ, ಇತರ ಧರ್ಮಗಳ ಬಗ್ಗೆಯೂ ಸರಿಯಾದ ತಿಳುವಳಿಕೆ ನಮ್ಮಲ್ಲಿ ಸೌಹಾರ್ದತೆ ಯನ್ನು ಮೂಡಿಸಲು ಸಾಧ್ಯ. ಮನಸ್ಸಿನ ಕತ್ತಲೆಯನ್ನು ಕಳೆದು ಕೊಂಡಾಗ ಪರಸ್ಪರ ಗೌರವ, ಸಾಮರಸ್ಯ ಸಾಧ್ಯ ಎಂದರು.
ಶಾಂತಿ ಪ್ರಕಾಶನದ ವ್ಯವಸ್ಥಾಪಕರಾದ ಮುಹ ಮ್ಮದ್ ಕುಂಞ ಮಾತನಾಡುತ್ತಾ, ಮನುಷ್ಯ ಪರಸ್ಪರ ಪ್ರೀತಿ, ಸೌಹಾರ್ದ ತೆಯಿಂದ ಬದುಕಲು, ನಮ್ಮನ್ನು ನಾವು ಅರಿತುಕೊಳ್ಳಲು ಹಬ್ಬಗಳ ಆಚರಣೆ ನಮ್ಮ ನಡುವೆ ಎಂದರು.
ಸಮಾರಂಭದಲ್ಲಿ ಮನಪಾ ಸದಸ್ಯೆ ಭಾನುಮತಿ,ಸದ್ಭಾವನ ವೇದಿಕೆಯ ಉಪಾಧ್ಯಕ್ಷ ಜೇಸನ್ ಪೀಟರ್ ಡಿ ಸೋಜ,ಪ್ರಧಾನ ಕಾರ್ಯದರ್ಶಿ ಸಾಲೆಹ್ ಮುಹಮ್ಮದ್, ಕಾರ್ಯದರ್ಶಿ ಎಂ.ಐ. ಖಲೀಲ್ ಮೊದಲಾದ ವರು ಉಪಸ್ಥಿತರಿ ದ್ದರು.ಸದ್ಭಾವನಾ ವೇದಿಕೆಯ ಅಧ್ಯಕ್ಷ ದಿವಾನ್ ಕೇಶವ ಭಟ್ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು, ಮುಹಮ್ಮದ್ ಅಲಿ ಕಾರ್ಯಕ್ರಮ ನಿರೂಪಿಸಿದರು.







