ಚುನಾವಣೆ ಬಹಿಷ್ಕರಿಸಲ್ಲ: ಕೊಡಗು ಅನುದಾನರಹಿತ ಶಾಲೆಗಳ ಆಡಳಿತ ಮಂಡಳಿಯ ಒಕ್ಕೂಟ ಸ್ಪಷ್ಟನೆ

ತಿಮ್ಮಯ್ಯ ಕೋಟ್ರಂಗಡ
ಮಡಿಕೇರಿ ಡಿ.20 : ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಕೊಡಗಿನ ಅನುದಾನ ರಹಿತ ಶಾಲೆಗಳು ಎಂದಿನಂತೆ ಆನ್ಲೈನ್ ಹಾಗೂ ಆಫ್ಲೈನ್ ತರಗತಿಗಳನ್ನು ನಡೆಸಲಿವೆ ಎಂದು ಕೊಡಗು ಜಿಲ್ಲಾ ಅನುದಾನರಹಿತ ಶಾಲೆಗಳ ಆಡಳಿತ ಮಂಡಳಿಯ ಒಕ್ಕೂಟ ತಿಳಿಸಿದೆ.
ಪತ್ರಿಕಾ ಪ್ರಕಟಣೆ ನೀಡಿರುವ ಒಕ್ಕೂಟದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ತಿಮ್ಮಯ್ಯ ಕೋಟ್ರಂಗಡ ಎಲ್ಲಾ ತರಗತಿಗಳನ್ನು ನಡೆಸಲಾಗುವುದು ಮತ್ತು ಸರ್ಕಾರದ ಆದೇಶದಂತೆ ಜನವರಿ 1 ರಿಂದ ಹಂತ ಹಂತವಾಗಿ ಶಾಲೆಗಳನ್ನು ಆರಂಭಿಸಲು ಸಿದ್ಧ ಇರುವುದಾಗಿ ಸ್ಪಷ್ಟಪಡಿಸಿದ್ದಾರೆ.
ಈ ಹಿಂದೆ ಗ್ರಾ.ಪಂ ಚುನಾವಣೆಯನ್ನು ಬಹಿಷ್ಕರಿಸಲು ಒಕ್ಕೂಟ ನಿರ್ಧರಿಸಿತ್ತು. ಆದರೆ ಈ ನಿರ್ಧಾರದಿಂದ ಹಿಂದೆ ಸರಿಯಲಾಗಿದ್ದು, ಮತದಾನದಲ್ಲಿ ಪಾಲ್ಗೊಳ್ಳುವುದಾಗಿ ತಿಮ್ಮಯ್ಯ ತಿಳಿಸಿದ್ದಾರೆ. ಸರ್ಕಾರದ ನಿಯಮಗಳನ್ನು ಪಾಲಿಸಲು ಬದ್ಧ ಎಂದು ಹೇಳಿದ್ದಾರೆ.
Next Story





