ಪ.ಬಂಗಾಳದ ಪ್ರಪ್ರಥಮ ತೈಲ, ಅನಿಲ ನಿಕ್ಷೇಪ ದೇಶಕ್ಕೆ ಸಮರ್ಪಣೆ

ಕೋಲ್ಕತಾ, ಡಿ.20: ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯಲ್ಲಿ ತೈಲ ಮತ್ತು ಅನಿಲ ನಿಕ್ಷೇಪವನ್ನು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ರವಿವಾರ ರಾಷ್ಟ್ರಕ್ಕೆ ಸಮರ್ಪಿಸಿದ್ದಾರೆ.
ಇದರೊಂದಿಗೆ ತೈಲ ಮತ್ತು ಅನಿಲ ಉತ್ಪಾದಿಸುವ ರಾಜ್ಯಗಳ ಪಟ್ಟಿಯಲ್ಲಿ ಪಶ್ಚಿಮ ಬಂಗಾಳಕ್ಕೂ ಸ್ಥಾನ ದೊರೆತಂತಾಗಿದೆ. ಕೋಲ್ಕತಾದಿಂದ ಸುಮಾರು 47 ಕಿ.ಮೀ ದೂರದ ಅಶೋಕನಗರ ಎಂಬಲ್ಲಿ ಕಾರ್ಯಾರಂಭಿಸುವ ಪೆಟ್ರೋಲಿಯಂ ನಿಕ್ಷೇಪದಿಂದ ಉತ್ಪಾದನೆಯಾಗುವ ತೈಲವನ್ನು ಇಂಡಿಯನ್ ಆಯಿಲ್ ಕಾರ್ಪೊರೇಶನ್‌ನ ಹಾಲ್ದಿಯಾ ರಿಫೈನರೀಸ್‌ಗೆ ರವಾನಿಸಲಾಗುವುದು ಎಂದು ಸಚಿವರು ಹೇಳಿದ್ದಾರೆ.
ಅಶೋಕನಗರದಲ್ಲಿ ತೈಲ ನಿಕ್ಷೇಪವನ್ನು 2018ರಲ್ಲಿ ಪತ್ತೆ ಮಾಡಲಾಗಿದೆ. ಇಲ್ಲಿ ಕಾರ್ಯಾರಂಭಿಸಲಿರುವ ತೈಲ ಉತ್ಪಾದನಾ ಘಟಕದಿಂದ ರಾಜ್ಯದಲ್ಲಿ ಉದ್ಯೋಗಾವಕಾಶ ಹೆಚ್ಚಲಿದೆ ಎಂದವರು ಹೇಳಿದ್ದಾರೆ.
Next Story





