Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಪೌಷ್ಟಿಕ ಭಾರತ!

ಅಪೌಷ್ಟಿಕ ಭಾರತ!

ವಾರ್ತಾಭಾರತಿವಾರ್ತಾಭಾರತಿ21 Dec 2020 12:10 AM IST
share
ಅಪೌಷ್ಟಿಕ ಭಾರತ!

ಈ ದೇಶವನ್ನು ಕೊರೋನಕ್ಕಿಂತಲೂ ಆತಂಕಕಾರಿಯಾಗಿ ಕಾಡುತ್ತಿರುವುದು ‘ಅಪೌಷ್ಟಿಕತೆ’. ಇಂದಿನ ಮಕ್ಕಳೇ ನಾಳಿನ ಭಾರತ ಎನ್ನುವ ಮಾತಿದೆ. ನಾಳಿನ ಭಾರತ ಹೇಗಿರುತ್ತದೆ ಎನ್ನುವುದನ್ನು ಇಂದಿನ ಮಕ್ಕಳು ಹೇಗೆ ಬೆಳೆಯುತ್ತಿದ್ದಾರೆ ಎನ್ನುವುದರ ಮೂಲಕ ಕಂಡುಕೊಳ್ಳಬಹುದು. ಅಪೌಷ್ಟಿಕತೆ ಸಾಂಕ್ರಾಮಿಕ ರೋಗವಲ್ಲ. ಆದರೆ ಅದು ಹಲವು ರೋಗಗಳ ತಾಯಿ. ಕೊರೋನಕ್ಕೆ ನಾಳೆ ಲಸಿಕೆ ಕಂಡು ಹಿಡಿಯಬಹುದು. ಆದರೆ ಕೊರೋನ ಈ ದೇಶದಲ್ಲಿ ಸೃಷ್ಟಿ ಮಾಡಿರುವ ಅಪೌಷ್ಟಿಕತೆಗೆ ಮದ್ದು ಕಂಡು ಹಿಡಿಯಲು ಸಾಧ್ಯವಿಲ್ಲ. ಪೌಷ್ಟಿಕವಾದ ಆಹಾರವನ್ನು ಒದಗಿಸುವುದೇ ಅಪೌಷ್ಟಿಕತೆಯನ್ನು ನಿವಾರಿಸಲು ಇರುವ ಒಂದೇ ಒಂದು ಮಾರ್ಗ. ಈ ದೇಶದಲ್ಲಿ ಮಕ್ಕಳನ್ನು ಅಪೌಷ್ಟಿಕತೆ ತಾಯಿಯ ಗರ್ಭದಲ್ಲೇ ಕಾಡುತ್ತದೆ. ಸೂಕ್ತ ಪೋಷಣೆಯಿಲ್ಲದ ಕಾರಣ ತಾಯಿಯೇ ಅಪೌಷ್ಟಿಕತೆಯಿಂದ ನರಳುತ್ತಿರುವಾಗ ಆರೋಗ್ಯವಂತ ಮಗುವನ್ನು ನಿರೀಕ್ಷಿಸುವುದು ಹೇಗೆ ಸಾಧ್ಯ.

2019-20ರ ಸಾಲಿನ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ ಮೊದಲ ಹಂತವು ಡಿಸೆಂಬರ್ 12ರಂದು ಬಿಡುಗಡೆಗೊಂಡಿದ್ದು, 17 ರಾಜ್ಯಗಳು ಹಾಗೂ 5 ಕೇಂದ್ರಾಡಳಿತ ಪ್ರದೇಶಗಳ ವ್ಯಾಪ್ತಿಯನ್ನು ಒಳಗೊಂಡಿದೆ. ಈ ಸಮೀಕ್ಷೆಯ ಪ್ರಕಾರ 5 ವರ್ಷಗಳಿಗಿಂತ ಕಡಿಮೆ ವಯಸ್ಸಿನ ಮಕ್ಕಳ ಕುಂಠಿತ ಬೆಳವಣಿಗೆಯು ಕೇರಳ, ಗೋವಾದಂತಹ ಪ್ರಗತಿಪರ ರಾಜ್ಯಗಳೂ ಸೇರಿದಂತೆ ಹಲವು ರಾಜ್ಯ, ಕೇಂದ್ರಾಡಳಿತಗಳಲ್ಲಿ ಗಣನೀಯವಾಗಿ ಹೆಚ್ಚಳವಾಗಿದೆ. ಸಾಂಪ್ರದಾಯಿಕವಾಗಿ ಪೌಷ್ಟಿಕ ಆಹಾರ ಸೇವನೆ ಉತ್ತಮವಾಗಿರುವ ಈಶಾನ್ಯ ಭಾರತದ ರಾಜ್ಯಗಳು, ಅದರಲ್ಲೂ ವಿಶೇಷವಾಗಿ ಮೇಘಾಲಯ, ನಾಗಾಲ್ಯಾಂಡ್ ಹಾಗೂ ತ್ರಿಪುರಗಳಲ್ಲಿಯೂ ಬೆಳವಣಿಗೆ ಕುಂಠಿತವಾಗಿರುವ ಮಕ್ಕಳ ಸಂಖ್ಯೆ ಹೆಚ್ಚಿದೆ. ಬಹುತೇಕ ರಾಜ್ಯಗಳಲ್ಲಿ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ಸಂಖ್ಯೆಯಲ್ಲಿ ಭಾರೀ ಏರಿಕೆಯಾಗಿದೆ. ಕೇಂದ್ರಾಡಳಿತ ಪ್ರದೇಶ ಲಡಾಖ್‌ನಲ್ಲಿ ಶೇ.9.3ರಷ್ಟಿದ್ದ ಅಪೌಷ್ಟಿಕ ಮಕ್ಕಳ ಸಂಖ್ಯೆ ಶೇ.17.3ಕ್ಕೆ ಏರಿದೆ. ಬಿಹಾರ ಹಾಗೂ ಅಸ್ಸಾಮಿನಲ್ಲಿಯೂ ಅಪೌಷ್ಟಿಕ ಮಕ್ಕಳ ಸಂಖ್ಯೆಯಲ್ಲಿ ಭಾರೀ ಹೆಚ್ಚಳವಾಗಿದೆ. ನಾಗಾಲ್ಯಾಂಡ್‌ನಲ್ಲಿ ಅಪೌಷ್ಟಿಕತೆಯ ಮಕ್ಕಳ ಸಂಖ್ಯೆಯು ಶೇ.11.3ರಿಂದ ಶೇ.19.10ಕ್ಕೇರಿದೆ. ಮಕ್ಕಳ ಕುಂಠಿತ ಬೆಳವಣಿಗೆ ಹಾಗೂ ಅಪೌಷ್ಟಿಕತೆಯು ಅತ್ಯಂತ ಗಂಭೀರವಾದ ವಿಷಯವಾಗಿದೆ. ಸಾಮಾಜಿಕ ಹಾಗೂ ಸಾಮುದಾಯಿಕ ದೃಷ್ಟಿಯಿಂದಲೂ ಈ ಆರೋಗ್ಯ ಪಿಡುಗುಗಳ ಕಾರಣಗಳ ಬಗ್ಗೆ ತನಿಖೆ ನಡೆಸುವುದು ಹಾಗೂ ಅವುಗಳನ್ನು ತಡೆಗಟ್ಟಲು ತಕ್ಷಣವೇ ಕ್ರಮಗಳನ್ನು ಕೈಗೊಳ್ಳುವುದು ಅತ್ಯಂತ ಮುಖ್ಯವಾದುದಾಗಿದೆ.

ರಕ್ತಹೀನತೆಯ ಸಮಸ್ಯೆಯನ್ನು ನಿಯಂತ್ರಿಸಲು ಸಾಧ್ಯವಾಗದೆ ಇರುವುದು ಒಂದು ಆತಂಕಕಾರಿ ಸಂಗತಿಯಾಗಿದೆ. ಈಗಲೂ ಹಲವಾರು ರಾಜ್ಯಗಳಲ್ಲಿ ರಕ್ತಹೀನತೆಯಿಂದ ಬಳಲುತ್ತಿರುವ ಸಂಖ್ಯೆಯು ಅಧಿಕವಾಗಿಯೇ ಇದೆ ಮತ್ತು ಹಲವಾರು ರಾಜ್ಯಗಳಲ್ಲಿ ವಿಶೇಷವಾಗಿ ಮಕ್ಕಳಲ್ಲಿ (6ರಿಂದ 9 ತಿಂಗಳುಗಳೊಳಗಿನ), ತಾಯಂದಿರಲ್ಲಿ ಹಾಗೂ 15ರಿಂದ 49 ವರ್ಷದೊಳಗಿನ ಮಹಿಳೆಯರಲ್ಲಿ ರಕ್ತಹೀನತೆ ಹೆಚ್ಚಳವಾಗುತ್ತಿದೆ. ಮಕ್ಕಳು, ಹದಿಹರೆಯದವರು, ಮಹಿಳೆಯರು ಹಾಗೂ ವಯಸ್ಕರಲ್ಲಿ ರಕ್ತಹೀನತೆಯಿಂದಾಗಿ ಅವರ ಬೌದ್ಧಿಕ ಹಾಗೂ ದೈಹಿಕ ಬೆಳವಣಿಗೆ, ಕಲಿಕಾ ಸಾಮರ್ಥ್ಯ, ದೈಹಿಕ ಚಟುವಟಿಕೆ ಹಾಗೂ ದುಡಿಯುವ ಮತ್ತು ಗಳಿಸುವ ಸಾಮರ್ಥ್ಯದ ಮೇಲೆ ಗಂಭೀರವಾದ ಪರಿಣಾಮ ಬೀರುತ್ತದೆ. ಸಂಕ್ಷಿಪ್ತವಾಗಿ ಹೇಳುವುದಾದರೆ ನಮ್ಮ ಮಾನವ ಸಂಪನ್ಮೂಲಗಳ ಗುಣಮಟ್ಟವನ್ನು ಕಡಿಮೆಗೊಳಿಸುತ್ತದೆ.

ಇನ್ನೊಂದು ಆತಂಕಕಾರಿ ಸೂಚನೆಯೆಂದರೆ ಬಹುತೇಕ ರಾಜ್ಯಗಳಲ್ಲಿ 24 ತಿಂಗಳುಗಳಿಗಿಂತ ಕಡಿಮೆ ಪ್ರಾಯದ ಶಿಶುಗಳಲ್ಲಿ ಸಮರ್ಪಕ ಪ್ರಮಾಣದ ಪಥ್ಯಾಹಾರ ಸೇವನೆಯು ಶೇ.20ಕ್ಕಿಂತಲೂ ಕಡಿಮೆಯಾಗಿದೆ. ಕೇರಳ, ಮೇಘಾಲಯ,ಲಡಾಖ್, ಪಶ್ಚಿಮ ಬಂಗಾಳ, ಸಿಕ್ಕಿಂ ಹಾಗೂ ಗೋವಾಗಳಲ್ಲಿ ಮಾತ್ರ ಶೇ.20ರಿಂದ ಶೇ.30ರಷ್ಟು ಮಕ್ಕಳಿಗೆ ಸಮರ್ಪಕವಾದ ಪಥ್ಯಾಹಾರ ದೊರೆಯುತ್ತಿದೆ. ಆದರೆ ಗುಜರಾತ್‌ನಲ್ಲಿ ಕೇವಲ ಶೇ.5.9 ಶಿಶುಗಳಿಗೆ ಮಾತ್ರ ಪಥ್ಯಾಹಾರ ಲಭ್ಯವಾಗುತ್ತಿದೆ. ಸಮಗ್ರ ಶಿಶು ಅಭಿವೃದ್ಧಿ ಯೋಜನೆಯಡಿ ಪೂರಕ ಪೌಷ್ಟಿಕ ಆಹಾರ ಪೂರೈಕೆ ಪ್ರಮಾಣದಲ್ಲಿ ಇಳಿಕೆಯಾಗುತ್ತಿದೆ ಇನ್ನೊಂದೆಡೆ ಮಾರುಕಟ್ಟೆಯಲ್ಲಿ ಮಿತದರದಲ್ಲಿ ಪೂರಕ ಪೌಷ್ಟಿಕ ಆಹಾರ ಲಭ್ಯವಾಗುತ್ತಿಲ್ಲ. ಈ ಕೊರತೆಯನ್ನು ನೀಗಿಸದೇ ಇದ್ದಲ್ಲಿ, ಮಕ್ಕಳಲ್ಲಿ ಕಡಿಮೆ ದೇಹತೂಕ, ಕುಂಠಿತ ಬೆಳವಣಿಗೆ ಹಾಗೂ ಅಪೌಷ್ಟಿಕ ಸಮಸ್ಯೆಯನ್ನು ಬಗೆಹರಿಸಲು ಸಾಧ್ಯವಾಗಲಾರದು.

ನಗರಪ್ರದೇಶಗಳಿಗೆ ಹೋಲಿಸಿದರೆ ಗ್ರಾಮೀಣ ಪ್ರದೇಶಗಳಲ್ಲಿ ಈ ಎಲ್ಲಾ ದತ್ತಾಂಶಗಳು ಕಳಪೆಯಾಗಿರುವುದು ವರದಿಯಲ್ಲಿ ಸ್ಪಷ್ಟವಾಗಿ ತಿಳಿದುಬರುತ್ತದೆ. ಬಡತನ, ನಿರುದ್ಯೋಗ ಅಥವಾ ಪ್ರಾಯಶಃ ನೋಟು ಅಮಾನ್ಯತೆಯಿಂದಾಗಿ ಆರ್ಥಿಕತೆಯ ಮೇಲೆ ಉಂಟಾಗಿರುವ ಪರಿಣಾಮ ಸೇರಿದಂತೆ ಹಲವು ಕಾರಣಗಳಿರಬಹುದು. ಗ್ರಾಮೀಣ ಪ್ರದೇಶಗಳಲ್ಲಿ ಇದು ಅತ್ಯಂತ ತೀವ್ರವಾಗಿದೆ ನೋಟು ಅಮಾನ್ಯತೆಯಿಂದಾಗಿ ಆನಂತರದ ಸತತ ಎರಡು ವರ್ಷಗಳಲ್ಲಿ ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗ, ವೇತನ ಹಾಗೂ ಖರ್ಚು, ವೆಚ್ಚಗಳ ಮೇಲೆ ಪರಿಣಾಮ ಬೀರಿರುವುದು ಕಂಡುಬಂದಿದೆ.ಮಕ್ಕಳು, ವಯಸ್ಕರು ಸೇರಿದಂತೆ ಭಾರತದ ಕೋಟ್ಯಂತರ ಜನರನ್ನು ಸದ್ದಿಲ್ಲದೆ, ಗುಪ್ತವಾಗಿ ಕಾಡುತ್ತಿರುವ ಅಪೌಷ್ಟಿಕತೆಯ ಪಿಡುಗು ಬಾಧಿತರನ್ನು ನೇರವಾಗಿ ಕೊಲ್ಲಲಾರದು ಹಾಗೂ ಅದು ಸಾಂಕ್ರಾಮಿಕವೂ ಅಗಿರುವುದಿಲ್ಲ. ದೀರ್ಘಾವಧಿಯ ಸುಸ್ತು ಹಾಗೂ ಕುಂಠಿತ ದೈಹಿಕ ಹಾಗೂ ಬೌದ್ಧಿಕ ಬೆಳವಣಿಗೆಯ ಲಕ್ಷಣಗಳನ್ನು ಹೊರತುಪಡಿಸಿ ಇತರ ಯಾವುದೇ ಅಸಾಧಾರಣವಾದ ಚಿಹ್ನೆಗಳನ್ನು ಅದು ತೋರಿಸುವುದಿಲ್ಲ.ಅತ್ಯಂತ ಕಳಪೆ ಅಭಿವೃದ್ಧಿ ಸೂಚಕಗಳು ಕಳಪೆ ಪೂರೈಕೆ ವ್ಯವಸ್ಥೆಗಳು ಹಾಗೂ ಅತ್ಯಂತ ಕನಿಷ್ಠ ತಲಾ ಆದಾಯವನ್ನು ಹೊಂದಿರುವ ಜಿಲ್ಲೆಗಳನ್ನು ಅಧಿಕ ಹೊರೆಯ ಜಿಲ್ಲೆಗಳು ಅಥವಾ ಆಶಾದಾಯಕ ಜಿಲ್ಲೆಗಳು ಎಂಬುದಾಗಿ ವಿಂಗಡಿಸಿವೆ. ಆದರೆ ಸರಕಾರಕ್ಕೆ ಪ್ರಾಮಾಣಿಕವಾಗಿ ಈ ಜಿಲ್ಲೆಗಳಲ್ಲಿ ಕಾಡುತ್ತಿರುವ ಅಪೌಷ್ಟಿಕತೆ, ಕಡಿಮೆ ದೇಹತೂಕದ ಪಿಡುಗನ್ನು ನಿಯಂತ್ರಿಸುವ ಮನಸ್ಸಿದ್ದಲ್ಲಿ ಅದು, ತನ್ನ ಪೌಷ್ಟಿಕತೆ ಕಾರ್ಯಕ್ರಮ (ಐಸಿಡಿಎಸ್ ಹಾಗೂ ಮಧ್ಯಾಹ್ನದೂಟ ಯೋಜನೆ)ಗಳನ್ನು ಮರುಪರಿಶೀಲಿಸಬೇಕಾಗಿದೆ ಹಾಗೂ ಮರುವಿನ್ಯಾಸಗೊಳಿಸಬೇಕಿದೆ. ಹಾಗಾದಲ್ಲಿ ಮಾತ್ರವೇ ಅದಕ್ಕೆ ನಿರೀಕ್ಷಿತ ಫಲಿತಾಂಶಗಳನ್ನು ಪಡೆಯಲು ಸಾಧ್ಯವಿದೆ.

ಲಾಕ್‌ಡೌನ್ ಬಳಿಕ ಈ ದೇಶದಲ್ಲಿ ಹಸಿವಿನ ಪ್ರಮಾಣ ಭೀಕರವಾಗಿದೆ ಎನ್ನುವುದನ್ನು ಈಗಾಗಲೇ ಹಲವು ವರದಿಗಳು ಹೇಳಿವೆ. ಇಂತಹ ಸಂದರ್ಭದಲ್ಲಿ ಪೌಷ್ಟಿಕ ಆಹಾರವನ್ನು ಗರಿಷ್ಠ ಪ್ರಮಾಣದಲ್ಲಿ ಒದಗಿಸುವ ಕಡೆಗೆ ಸರಕಾರ ಗಮನ ಹರಿಸಬೇಕು. ಆದರೆ ಗೋಹತ್ಯೆಯಂತಹ ಕಾನೂನನ್ನು ಜಾರಿಗೊಳಿಸಿ ಇರುವ ಪೌಷ್ಟಿಕ ಆಹಾರವನ್ನು ಬಡವರಿಂದ ಕಿತ್ತುಕೊಳ್ಳಲು ಯತ್ನಿಸಲಾಗುತ್ತಿದೆ. ಈಶಾನ್ಯ ಭಾಗದಲ್ಲಿ ಗೋಮಾಂಸಾಹಾರ ಗ್ರಾಮೀಣ ಪ್ರದೇಶದ ಜನರ ಪ್ರಮುಖ ಆಹಾರವಾಗಿದೆ. ಹೈನೋದ್ಯಮವನ್ನು ಸುತ್ತುವರಿದ ಚರ್ಮದ ಉದ್ಯಮ, ಮಾಂಸದ ಉದ್ಯಮ ಇತ್ಯಾದಿಗಳೊಂದಿಗೆ ಬಡವರ್ಗಕ್ಕೆ ನೇರ ಸಂಬಂಧವಿದೆ. ಸರಕಾರದ ನೀತಿ ಈ ವರ್ಗದ ಮೇಲೆ ಭಾರೀ ಪ್ರಹಾರವನ್ನುಂಟು ಮಾಡಿದೆ. ಸರಕಾರದ ನೀತಿ ಹೀಗೆ ಮುಂದುವರಿದರೆ ಭವಿಷ್ಯದಲ್ಲಿ ಭಾರತ ಅಪೌಷ್ಟಿಕ ದೇಶವಾಗಿ ವಿಶ್ವದಲ್ಲೇ ಅಗ್ರಸ್ಥಾನಕ್ಕೇರುವುದರಲ್ಲಿ ಯಾವ ಸಂಶಯವೂ ಇಲ್ಲ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X