ಯುರೋಪ್ ದೇಶಗಳಿಂದ ಬ್ರಿಟಿಶ್ ವಿಮಾನಗಳಿಗೆ ನಿಷೇಧ

ಲಂಡನ್,ಡಿ.21: ದೇಶದಲ್ಲಿ ಕಾಣಿಸಿಕೊಂಡಿರುವ ನೂತನ ಪ್ರಭೇದದ ಕೊರೋನ ವೈರಸ್ ನಿಯಂತ್ರಣವನ್ನು ಮೀರಿ ಹರಡುತ್ತಿದೆಯೆಂದು ಬ್ರಿಟಿಶ್ ಸರಕಾರ ಎಚ್ಚರಿಕೆ ನೀಡಿರುವ ಹಿನ್ನೆಲೆಯಲ್ಲಿ, ಬ್ರಿಟನ್‌ನಿಂದ ಆಗಮಿಸುತ್ತಿರುವ ಎಲ್ಲಾ ವಿಮಾನಗಳ ಹಾರಾಟವನ್ನು ಯುರೋಪ್ ಒಕ್ಕೂಟದ ರಾಷ್ಟ್ರಗಳು ನಿಷೇಧಿಸಲು ಆರಂಭಿಸಿವೆ.
ನೆದರ್‌ಲ್ಯಾಂಡ್ ರವಿವಾರದಿಂದಲೇ ಜಾರಿಗೆ ಬರುವಂತೆ ಬ್ರಿಟನ್‌ನ ಎಲ್ಲಾ ಪ್ರಯಾಣಿಕ ವಿಮಾನಗಳ ಹಾರಾಟವನ್ನು ರದ್ದುಪಡಿಸಿದೆ. ಜರ್ಮನಿಯೂ ಕೂಡಾ ಬ್ರಿಟನ್ ಹಾಗೂ ದಕ್ಷಿಣ ಆಫ್ರಿಕದಿಂದ ಬರುವ ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸುವ ಬಗ್ಗೆ ತಾನು ಗಂಭೀರವಾಗಿ ಚಿಂತಿಸುತ್ತಿರುವುದಾಗಿ ತಿಳಿಸಿದೆ. ಇಟಲಿಯೂ ಬ್ರಿಟನ್‌ನಿಂದ ಆಗಮಿಸುವ ವಿಮಾನಗಳನ್ನು ನಿಷೇಧಿಸಲು ನಿರ್ಧರಿಸಿದೆ.
Next Story





