Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಪಂಪ್‌ವೆಲ್ ಸರ್ವಿಸ್ ರಸ್ತೆ ಸಮಸ್ಯೆಗಳ...

ಪಂಪ್‌ವೆಲ್ ಸರ್ವಿಸ್ ರಸ್ತೆ ಸಮಸ್ಯೆಗಳ ಆಗರ

► ಪಾದಚಾರಿಗಳ ಜೀವ ಹಿಂಡುವ ಮಣ್ಣಿನ ರಾಶಿ ► ತಂಗುದಾಣವಿಲ್ಲದೆ ಬಿಸಿಲಲ್ಲೇ ಬಸ್‌ಗೆ ಕಾಯುವ ಪ್ರಯಾಣಿಕರು

ಬಂದೇನವಾಝ್ ಮ್ಯಾಗೇರಿಬಂದೇನವಾಝ್ ಮ್ಯಾಗೇರಿ21 Dec 2020 12:26 PM IST
share
ಪಂಪ್‌ವೆಲ್ ಸರ್ವಿಸ್ ರಸ್ತೆ ಸಮಸ್ಯೆಗಳ ಆಗರ

ಮಂಗಳೂರು : ಸ್ಮಾರ್ಟ್‌ಸಿಟಿಯಾಗಿ ಮಾರ್ಪಡಲು ಮಂಗಳೂರು ತುದಿಗಾಲಲ್ಲಿ ನಿಂತಿದೆ. ಆದರೆ, ಕಡಲ ನಗರಿಯ ಪ್ರವೇಶದ್ವಾರದಂತಿರುವ ಪಂಪ್‌ವೆಲ್ ಸರ್ವಿಸ್ ರಸ್ತೆಯು ಸ್ಥಳೀಯರು, ಪ್ರಯಾಣಿಕರ ಪಾಲಿಗೆ ಸವಾಲಾಗಿದೆ.

ರಸ್ತೆ ಬದಿಯಲ್ಲೇ ಅಶುಚಿತ್ವ, ಅಸಮರ್ಪಕ ಪಾದಚಾರಿ ಮಾರ್ಗ, ರಾಶಿ ಬಿದ್ದಿರುವ ಲೋಡುಗಟ್ಟಲೇ ಮಣ್ಣು ಗುಡ್ಡೆಗಳು, ವಾಹನ ಸಂಚರಿಸಿದರೆ ಮುಖಕ್ಕೆ ರಾಚುವ ಧೂಳು ಹೀಗೆ ಹಲವು ತೊಡಕುಗಳಿಂದ ಕೂಡಿವೆ.

ಪಂಪ್‌ವೆಲ್‌ನಿಂದ ಇಂಡಿಯಾನ ಆಸ್ಪತ್ರೆಗೆ ತೆರಳುವ ಮಾರ್ಗದಲ್ಲಿ ಬೃಹತ್ ಮಣ್ಣಿನ ಗುಡ್ಡೆಗಳು ಪಾದಚಾರಿಗಳಿಗೆ ಅಕ್ಷರಶಃ ಜೀವ ಹಿಂಡುತ್ತಿವೆ. ಕಳೆದ ಎರಡು-ಮೂರು ತಿಂಗಳ ಹಿಂದೆ ಇಲ್ಲಿ ಮಣ್ಣಿನ ರಾಶಿಗಳನ್ನು ಸುರಿಯಲಾಗಿದೆ. ಈ ರಸ್ತೆಯಲ್ಲಿ ಸಂಚರಿಸುವ ಬಸ್, ವಿವಿಧ ವಾಹನಗಳಿಂದ ಮೇಲೇಳುವ ಧೂಳು ಪಾದಚಾರಿಗಳೂ ಹಾಗೂ ದ್ವಿಚಕ್ರ ವಾಹನ ಸವಾರರಿಗೆ ತ್ರಾಸದಾಯಕವಾಗಿದೆ.

ಅಸಮರ್ಪಕ ಪಾದಚಾರಿ ಮಾರ್ಗ: ನಗರದ ಕಡೆಯಿಂದ ಇಂಡಿಯಾನ ಆಸ್ಪತ್ರೆ ದಾರಿಯ ಪಾದಚಾರಿ ಮಾರ್ಗ ಅಕ್ಷರಶಃ ಕಿತ್ತು ಹೋಗಿದೆ. ಪಾದಚಾರಿಗಳು ನಡೆದಾಡುವ ಸ್ಲಾಬ್‌ಗಳು ಹಲವೆಡೆ ಮುರಿದು, ಅಪಾಯಕ್ಕೆ ಆಹ್ವಾನ ನೀಡುತ್ತಿವೆ. ಇನ್ನು ಕೆಲವೆಡೆ ಸ್ಲಾಬ್‌ಗಳೇ ಇಲ್ಲದೆ ವಾಹನ ಸಂಚರಿಸುವ ಡಾಂಬರೀಕರಣ ರಸ್ತೆಯಲ್ಲೇ ನಡೆದುಕೊಂಡು ಹೋಗುವ ಸ್ಥಿತಿ ಇದೆ.

ಇದೇ ಮಾರ್ಗದ ಪೆಟ್ರೋಲ್ ಬಂಕ್ ಎದುರು ಕೂಡ ಅವೈಜ್ಞಾನಿಕವಾಗಿ ಮಣ್ಣಿನ ರಾಶಿ ಸುರಿಯಲಾಗಿದೆ. ಇಲ್ಲಿ ಪಾದಚಾರಿಗಳು ಬಂಕ್‌ನ ಆವರಣ ಪ್ರವೇಶಿಸಿಯೇ ನಡೆದು ಹೋಗುವ ದುಃಸ್ಥಿತಿ ನಿರ್ಮಾಣವಾಗಿದೆ. ಇನ್ನು ಹಲವೆಡೆ ರಾಜಕಾಲುವೆ, ಚರಂಡಿಯ ಮೇಲೆ ಹೊದಿಸಲಾದ ಸ್ಲಾಬ್‌ಗಳು ಕೂಡ ಕಿತ್ತು ಹೋಗಿದ್ದು, ಬೈಕ್ ಸವಾರರಿಗೆ ಭಾರೀ ಅಪಾಯ ಒಡ್ಡುತ್ತಿವೆ. ಇನ್ನು ಕೆಲವೆಡೆ ಪಾದಚಾರಿ ಮಾರ್ಗವೇ ಕಾಣುವುದಿಲ್ಲ. ಎಲ್ಲವೂ ಧೂಳುಮಯ. ರಸ್ತೆಯ ಪಕ್ಕದ ಪಾದಚಾರಿ ಮಾರ್ಗದಲ್ಲೂ ದ್ವಿಚಕ್ರ, ನಾಲ್ಕು ಚಕ್ರದ ವಾಹನಗಳನ್ನು ನಿಲ್ಲಿಸಲಾಗುತ್ತಿದೆ.

ಮಣ್ಣುಗುಡ್ಡೆ ತೆರವಿಗೆ ಆಗ್ರಹ: ‘ಪಂಪ್‌ವೆಲ್ ಸರ್ವಿಸ್ ರಸ್ತೆ ದುರಸ್ತಿಗೆ ಸುರಿಯಲಾಗಿರುವ ಮಣ್ಣಿನ ರಾಶಿಯನ್ನು ತೆರವು ಮಾಡಬೇಕು. ಅಲ್ಲದೆ ಈ ರಸ್ತೆಯನ್ನು ದುರಸ್ತಿ ಮಾಡಬೇಕು ಎಂದು ಬೀದಿಬದಿ ವ್ಯಾಪಾರಸ್ಥ ಅನಿಲ್ ಎಂಬವರು ಒತ್ತಾಯಿಸಿದ್ದಾರೆ.

ಧೂಳಿನಿಂದ ವ್ಯಾಪಾರವೇ ಇಲ್ಲ: ‘ರಸ್ತೆ ಬದಿಯಲ್ಲಿ ರಾಶಿಗಟ್ಟಲೇ ಮಣ್ಣು ಹಾಕಿರುವುದರಿಂದ ವಾಹನಗಳು ಸಂಚರಿಸಿದಷ್ಟೇ ವೇಗವಾಗಿ ಧೂಳು ಮುಖಕ್ಕೆ ರಾಚುತ್ತಿದೆ. ರಸ್ತೆಯೆಲ್ಲ ಅಶುಚಿತ್ವದಿಂದ ಕೂಡಿದೆ. ವ್ಯಾಪಾರ ವಹಿವಾಟು ಇಲ್ಲದೇ ಸಂಕಷ್ಟ ಎದುರಿಸುತ್ತಿದ್ದೇವೆ. ಈ ಮಾರ್ಗದಲ್ಲಿ ಹೆಚ್ಚು ಧೂಳು ಏಳುವುದರಿಂದ ಗ್ರಾಹಕರು ಹಣ್ಣು-ಹಂಪಲು ಖರೀದಿಸಲು ಹಿಂದೇಟು ಹಾಕುತ್ತಾರೆ’ ಎಂದು ಬೇಸರ ವ್ಯಕ್ತಪಡಿಸುತ್ತಾರೆ ವ್ಯಾಪಾರಸ್ಥ ಖಾದರ್.

ಕಳೆದ ಹಲವು ತಿಂಗಳಿಂದ ರಸ್ತೆಯಲ್ಲೇ ಮಣ್ಣಿನ ರಾಶಿ ಸುರಿಯಲಾಗಿದೆ. ರಸ್ತೆ ಕಾಮಗಾರಿಗೆಂದು ಹೇಳಲಾಗುತ್ತದೆ. ಆದರೆ ಇನ್ನುವರೆಗೆ ಯಾವುದೇ ಕಾಮಗಾರಿ ಆರಂಭವಾಗಿಲ್ಲ. ವಾಹನಗಳಿಂದ ಏಳುವ ಧೂಳು ಉಸಿರಾಟಕ್ಕೆ ತೊಂದರೆಯಾಗಿದೆ. ಧೂಳು ಎದ್ದರೆ ರಸ್ತೆಯೇ ಕಾಣಿಸುವುದಿಲ್ಲ. ಸಂಬಂಧಪಟ್ಟ ಇಲಾಖೆಯವರು ಕೂಡಲೇ ಮಣ್ಣು ತೆರವು ಮಾಡಬೇಕು ಎನ್ನುತ್ತಾರೆ ಎಳೆನೀರು ಮಾರುವ ಸಾದಿಕ್.

ಬಿಸಿಲಲ್ಲೇ ಬಸ್‌ಗೆ ಕಾಯುವ ಪ್ರಯಾಣಿಕರು

ಪಂಪ್‌ವೆಲ್‌ನಿಂದ ತೊಕ್ಕೊಟ್ಟು, ಉಳ್ಳಾಲದ ಕಡೆಗೆ ಪ್ರಯಾಣಿಸುವ ಪ್ರಯಾಣಿಕರು ಕೂಡ ಹಲವು ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ. ಕೂಡಲೇ ಬಸ್ ನಿಲ್ದಾಣ ನಿರ್ಮಾಣವಾಗಲಿ ಎನ್ನುವ ಕೂಗು ಪ್ರಯಾಣಿಕರಿಂದ ಕೇಳಿಬರುತ್ತಿದೆ.

‘ಬಸ್‌ಗಾಗಿ ಪಂಪ್‌ವೆಲ್ ವೃತ್ತದ ಸಮೀಪವೇ ಬಿಸಿಲಲ್ಲಿ ನಿಲ್ಲುವ ಪ್ರಮೇಯ ಏರ್ಪಟ್ಟಿದೆ. ಸಮೀಪವೇ ಬಸ್ ನಿಲ್ದಾಣ ಕಾಮಗಾರಿ ನಡೆಯುತ್ತಿದ್ದರೂ ಆಮೆಗತಿಯಲ್ಲಿ ಸಾಗುತ್ತಿದೆ. ಕಾಮಗಾರಿ ಆದಷ್ಟು ವೇಗ ಪಡೆದುಕೊಂಡರೆ ಎಲ್ಲರಿಗೂ ಸಹಾಯವಾಗಲಿದೆ’ ಎನ್ನುವುದು ಉಳ್ಳಾಲಕ್ಕೆ ತೆರಳಲು ಬ್ಯಾಗ್ ಹೆಗಲಿಗೆ ಹಾಕಿ ಬಸ್ ಕಾಯುತ್ತ ನಿಂತಿದ್ದ ವೆಂಕಟೇಶ್ ಅವರ ಮಾತು.

share
ಬಂದೇನವಾಝ್ ಮ್ಯಾಗೇರಿ
ಬಂದೇನವಾಝ್ ಮ್ಯಾಗೇರಿ
Next Story
X