ಮಂಗಳೂರು: ಸೈಯದ್ ಅಬ್ದುಲ್ ಮೂಮಿನ್ (ರಾಶಿದ್) ನಿಧನ

ಮಂಗಳೂರು, ಡಿ.21: ಮೂಲತಃ ಬಿಕರ್ನಕಟ್ಟೆಯ ಪ್ರಸ್ತುತ ನಗರದ ಹೈಲ್ಯಾಂಡ್ ನಿವಾಸಿ ಸೈಯದ್ ಅಬ್ದುಲ್ ಮೂಮಿನ್ (ರಾಶಿದ್ ಭಾಯ್) (63) ಸೋಮವಾರ ಅಪರಾಹ್ನ ತನ್ನ ಮನೆಯಲ್ಲಿ ನಿಧನರಾದರು.
ಗಲ್ಫ್ ಉದ್ಯೋಗಿಯಾಗಿದ್ದ ಅವರು ಜಮಾಅತೆ ಇಸ್ಲಾಮೀ ಹಿಂದ್‌ನ ಸಕ್ರಿಯ ಕಾರ್ಯಕರ್ತರಾಗಿದ್ದರು. ಕೆಲವು ಸಮಯದಿಂದ ಅನಾರೋಗ್ಯದಿಂದಿದ್ದ ಅವರನ್ನು ಸೋಮವಾರ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲು ಸಿದ್ಧತೆ ನಡೆಸುತ್ತಿರುವಾಗಲೇ ಕೊನೆಯುಸಿರೆಳೆದರು.
ಮೃತರು ಪತ್ನಿ ‘ಅನುಪಮ’ ಮಾಸಿಕದ ಸಹ ಸಂಪಾದಕಿ ಸಾಜಿದಾ ಮೂಮಿನ್ ಮತ್ತು ಮೂವರು ಪುತ್ರರು ಹಾಗೂ ಓರ್ವ ಪುತ್ರಿ ಸಹಿತ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
ಪರೋಪಕಾರಿ ಹಾಗು ಉದಾರ ಮನೋಭಾವದ ರಾಶಿದ್ ಭಾಯ್ ಸಾಮಾಜಿಕ, ಧಾರ್ಮಿಕ ಹಾಗು ಸೇವಾ ಚಟುವಟಿಕೆಗಳಲ್ಲಿ ಸಹಕರಿಸಲು ಸದಾ ಮುಂಚೂಣಿಯಲ್ಲಿರುತ್ತಿದ್ದರು.
ಮಂಗಳವಾರ ಬೆಳಗ್ಗೆ 9 ಗಂಟೆಗೆ ಬಿಕರ್ನಕಟ್ಟೆಯ ಅಹ್ಸನುಲ್ ಮಸಾಜಿದ್‌ನಲ್ಲಿ ದಫನ ಕಾರ್ಯ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
Next Story





