ಬ್ರಿಟನ್ ನಲ್ಲಿ ಪತ್ತೆಯಾಗಿರುವ ಕೊರೋನದ ಹೊಸ ಪ್ರಭೇದ ಮಾರಕವಲ್ಲ: ವಿವೇಕ್ ಮೂರ್ತಿ

ವಾಷಿಂಗ್ಟನ್: ಬ್ರಿಟನ್ ನಲ್ಲಿ ಪತ್ತೆಯಾಗಿರುವ ಹಾಗೂ ವೇಗವಾಗಿ ಹರಡುತ್ತಿರುವ ಕೊರೋನ ವೈರಸ್ ನ ಹೊಸ ಪ್ರಭೇದ ಮಾರಕ ಎನ್ನುವುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ಅಮೆರಿಕದ ಸರ್ಜನ್ ಜನರಲ್, ಭಾರತ ಮೂಲದ ವಿವೇಕ್ ಮೂರ್ತಿ ಹೇಳಿದ್ದಾರೆ.
ಈಗಾಗಲೇ ಅಭಿವೃದ್ಧಿಪಡಿಸಲಾಗಿರುವ ಕೋವಿಡ್ ಲಸಿಕೆಗಳು ಹೊಸ ಪ್ರಭೇದದ ವಿರುದ್ದ ಪರಿಣಾಮಕಾರಿಯಾಗಿ ಕೆಲಸ ಮಾಡುವುದಿಲ್ಲ ಎನ್ನಲು ಕಾರಣಗಳಿಲ್ಲ ಎಂದೂ ಅವರು ಹೇಳಿದ್ದಾರೆ.
ಬ್ರಿಟನ್ ನಿಂದ ಈಗ ಬಂದಿರುವ ಹೊಸ ಸುದ್ದಿ ಪ್ರಕಾರ, ಈಗಾಗಲೇ ಹರಡಿರುವ ಕೊರೋನ ವೈರಸ್ ಗಿಂತಲೂ ಹೊಸ ಪ್ರಭೇದವು ಹೆಚ್ಚು ಸಾಂಕ್ರಾಮಿಕ ಎಂಬುದು ತಿಳಿದು ಬಂದಿದೆ. ಇದು ಹೆಚ್ಚು ಹರಡುವಂತೆ ತೋರುತ್ತಿದೆ. ಆದರೆ ಹೆಚ್ಚು ಮಾರಕ ಎಂಬುದಕ್ಕೆ ಪುರಾವೆಗಳಿಲ್ಲ ಎಂದು ಅವರು ತಿಳಿಸಿದ್ದಾರೆ.
Next Story





