ರೈತ ಕಾರ್ಮಿಕರ ಐಕ್ಯ ಹೋರಾಟ ಇಂದಿನ ಅನಿವಾರ್ಯ: ಕೆ.ಎನ್.ಉಮೇಶ್

ಕುಂದಾಪುರ, ಡಿ.21: ಮುಂದಿನ ಸವಾಲುಗಳನ್ನು ಎದುರಿಸಲು ರೈತ- ಕಾರ್ಮಿಕರು ಐಕ್ಯ ಹೋರಾಟವನ್ನು ರಾಜ್ಯ ಹಾಗೂ ರಾಷ್ಟ್ರವ್ಯಾಪಿ ನಡೆಸುವ ಅವಶ್ಯಕತೆಯಿದೆ. ರೈತ ಮತ್ತು ಕಾರ್ಮಿಕರಿಂದ ಬಿಜೆಪಿ ಸೋಲಬೇಕಾಗಿದೆ. ಅದಕ್ಕಾಗಿ ರೈತ ಕಾರ್ಮಿಕರ ಐಕ್ಯ ಹೋರಾಟ ತೀವ್ರವಾಗಿ ಬೆಳೆದು ಬರಬೇಕಾ ಗಿದೆ ಎಂದ ಸಿಐಟಿಯು ರಾಜ್ಯ ಕಾರ್ಯದರ್ಶಿ ಕೆ.ಎನ್.ಉಮೇಶ್ ಹೇಳಿದ್ದಾರೆ.
ಕುಂದಾಪುರ ಹೆಂಚು ಕಾರ್ಮಿಕರ ಭವನದಲ್ಲಿ ರವಿವಾರ ನಡೆದ ಉಡುಪಿ ಜಿಲ್ಲಾ ಹೆಂಚು ಕಾರ್ಮಿಕರ ಸಂಘ(ಸಿಐಟಿಯು)ದ 20ನೆ ವಾರ್ಷಿಕ ಮಹಾಸಭೆ ಯಲ್ಲಿ ಭಾವಹಿಸಿ ಅವರು ಮಾತನಾಡುತಿದ್ದರು.
ಕಾರ್ಮಿಕ ವಿರೋಧಿಯಾಗಿ ಕೇಂದ್ರ ಸರಕಾರ ರೂಪಿಸಿ ರುವ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಹಾಗೂ ರೈತ ವಿರೋಧಿ ಕೃಷಿ ಸಂಬಂಧಿ ಕಾಯಿದೆ ಗಳನ್ನು ಹಿಂತೆಗೆದುಕೊಳ್ಳಬೇಕು. ರಾಜ್ಯ ಸರಕಾರ ಹೊರಡಿಸಿದ ಸುಗ್ರೀವಾಜ್ಞೆ ವಾಪಾಸ್ಸು ಪಡೆಯಬೆೀಕು ಎಂದು ಅವರು ಒತ್ತಾಯಿಸಿದರು.
ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ವಿ.ನರಸಿಂಹ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಎಚ್.ನರಸಿಂಹ ಕಳೆದ ಒಂದು ವರ್ಷದ ಚಟುವಟಿಕಾ ವರದಿ ಹಾಗೂ ಲೆಕ್ಕಪತ್ರವನ್ನು ಮಂಡಿಸಿದರು. ಕೇಂದ್ರ ಮತ್ತು ರಾಜ್ಯ ಸರಕಾರ ಗಳ ಕಾರ್ಮಿಕ ವಿರೋಧಿ ನೀತಿಯನ್ನು ಖಂಡಿಸಿ, ಹೆಂಚು ಉದ್ಯಮಕ್ಕೆ ಕಚ್ಚಾ ವಸ್ತುಗಳ ಪೂರೈಕೆಗೆ ಸರಕಾರದ ಸಹಕಾರ ಮತ್ತು ಇಎಸ್‌ಐ ಸೌಲಭ್ಯಗಳನ್ನು ಇಲಾಖೆಯು ಕಾರ್ಮಿಕರಿಗೆ ವಂಚನೆ ಯಾಗದಂತೆ ನೀಡಲು ಒತ್ತಾಯಿಸಿ ನಿರ್ಣಯಗಳನ್ನು ಅಂಗೀಕರಿಸಲಾಯಿತು.
ಸಿಐಟಿಯು ಉಡುಪಿ ಜಿಲ್ಲಾಧ್ಯಕ್ಷ ಕೆ.ಶಂಕರ್, ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಬೀಡಿ ಕಾರ್ಮಿಕರ ಸಂಘದ ಅಧ್ಯಕ್ಷ ಮಹಾಬಲ ವಡೇರಹೋಬಳಿ ಮಾತನಾಡಿ ದರು. ಸಂಘದ ಅಧ್ಯಕ್ಷರಾಗಿ ವಿ.ನರಸಿಂಹ, ಪ್ರಧಾನ ಕಾರ್ಯದರ್ಶಿಯಾಗಿ ಎಚ್.ನರಸಿಂಹ ಮತ್ತು ಕೋಶಾಧಿಕಾರಿಯಾಗಿ ಪ್ರಕಾಶ್ ಕೋಣಿ ಅವರನ್ನು ಆಯ್ಕೆ ಮಾಡಲಾಯಿತು. ಒಟ್ಟು 9 ಮಂದಿಯನ್ನು ಪದಾಧಿಕಾರಿಗಳು ಮತ್ತು 57 ಮಂದಿಯನ್ನು ಕಾರ್ಯಕಾರಿ ಸಮಿತಿ ಸದಸ್ಯ ರಾಗಿ ಆರಿಸಲಾಯಿತು.







