ಸಿನೆಮಾ ಶೂಟಿಂಗ್ ಸೆಟ್‌ನಲ್ಲೇ ಕುಸಿದು ಬಿದ್ದ ಮಿಥುನ್ ಚಕ್ರವರ್ತಿ

ಮುಂಬೈ, ಡಿ.21: ಹಿರಿಯ ಚಿತ್ರನಟ ಮಿಥುನ್ ಚಕ್ರವರ್ತಿ ಸಿನೆಮಾ ಶೂಟಿಂಗ್ ಸೆಟ್‌ನಲ್ಲೇ ಕುಸಿದು ಬಿದ್ದ ಘಟನೆ ನಡೆದಿದೆ. ಅವರು ಶೀಘ್ರ ಚೇತರಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.
ವಿವೇಕ್ ಅಗ್ನಿಹೋತ್ರಿ ನಿರ್ದೇಶನದಲ್ಲಿ ಮುಸ್ಸೋರಿಯಲ್ಲಿ ಚಿತ್ರೀಕರಣವಾಗುತ್ತಿರುವ ‘ದಿ ಕಾಶ್ಮೀರ್ ಫೈಲ್ಸ್’ ಸಿನೆಮಾದ ಸೆಟ್‌ನಲ್ಲಿ ಈ ಘಟನೆ ನಡೆದಿದೆ. ಆಹಾರ ನಂಜು(ಫುಡ್ ಪಾಯ್ಸನಿಂಗ್) ಕಾರಣದಿಂದ ಬಳಲಿದ ಮಿಥುನ್‌ಗೆ ಎದ್ದುನಿಲ್ಲಲೂ ಕಷ್ಟವಾಗುತ್ತಿತ್ತು. ಆದರೂ ತನ್ನ ಪಾಲಿನ ಚಿತ್ರೀಕರಣ ಪೂರ್ಣಗೊಳಿಸುವಂತೆ ಅವರು ಒತ್ತಾಯಿಸಿದರು ಎಂದು ವರದಿ ಹೇಳಿದೆ.
Next Story





