ಅಮೆರಿಕ: 900 ಬಿಲಿಯ ಡಾಲರ್ ಕೊರೋನ ಪ್ಯಾಕೇಜ್‌ಗೆ ಅಂಗೀಕಾರ

ವಾಶಿಂಗ್ಟನ್, ಡಿ. 21: ಸುಮಾರು 900 ಬಿಲಿಯ ಡಾಲರ್ (ಸುಮಾರು 66.63 ಲಕ್ಷ ಕೋಟಿ ರೂಪಾಯಿ) ಕೊರೋನ ಪರಿಹಾರ ಪ್ಯಾಕೇಜ್‌ಗೆ ಅಮೆರಿಕದ ಸಂಸದರು ರವಿವಾರ ಸಮ್ಮತ ವ್ಯಕ್ತಪಡಿಸಿದ್ದಾರೆ.
ಲಸಿಕೆ ವಿತರಣೆ ಹಾಗೂ ಅದಕ್ಕೆ ಬೇಕಾಗುವ ಸಲಕರಣೆಗಳ ಖರೀದಿಗೆ ನೆರವು ನೀಡುವುದು, ವಾರಕ್ಕೆ 300 ಡಾಲರ್‌ನಂತೆ ಹೆಚ್ಚುವರಿ ನಿರುದ್ಯೋಗ ಭತ್ತೆ ನೀಡುವುದು ಹಾಗೂ ಕೊರೋನ ವೈರಸ್ ಸೋಂಕು ಪತ್ತೆಹಚ್ಚುವ ಪರೀಕ್ಷೆ ಮಾಡಿಸಿಕೊಳ್ಳಲು ಹೊಸದಾಗಿ 600 ಡಾಲರ್ ನೀಡುವುದು ಕೊರೋನ ವೈರಸ್ ಪ್ಯಾಕೇಜ್‌ನಲ್ಲಿ ಸೇರಿದೆ.
‘‘ಸುಮಾರು 900 ಬಿಲಿಯ ಡಾಲರ್ ಪ್ಯಾಕೇಜ್‌ಗೆ ನಾವು ಸಮ್ಮತಿ ನೀಡಿದ್ದೇವೆ. ಕೊರೋನ ವೈರಸ್‌ನಿಂದಾಗಿ ತೀವ್ರ ಸಮಸ್ಯೆಗಳನ್ನು ಎದುರಿಸುತ್ತಿರುವ ಹಾಗೂ ಪರಿಹಾರಕ್ಕಾಗಿ ತುಂಬಾ ಸಮಯದಿಂದ ಕಾಯುತ್ತಿರುವ ಜನರನ್ನು ಗಮನದಲ್ಲಿಟ್ಟುಕೊಂಡು ಪ್ಯಾಕೇಜನ್ನು ರೂಪಿಸಲಾಗಿದೆ’’ ಎಂದು ರಿಪಬ್ಲಿಕನ್ ಸೆನೆಟ್ ನಾಯಕ ಮಿಚ್ ಮೆಕನೆಲ್ ಹೇಳಿಕೆಯೊಂದರಲ್ಲಿ ತಿಳಿಸಿದರು.
ಕೊರೋನ ವೈರಸ್ ಪ್ಯಾಕೇಜ್‌ಗೆ ಸಂಬಂಧಿಸಿ ರಿಪಬ್ಲಿಕನ್ ಸಂಸದರು ಮತ್ತು ಶ್ವೇತಭವನದೊಂದಿಗೆ ಒಪ್ಪಂದಕ್ಕೆ ಬಂದಿರುವುದನ್ನು ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನ ಸ್ಪೀಕರ್, ಡೆಮಾಕ್ರಟಿಕ್ ಪಕ್ಷದ ನ್ಯಾನ್ಸಿ ಪೆಲೋಸಿ ಖಚಿತಪಡಿಸಿದ್ದಾರೆ.





