ಗುತ್ತಿಗೆ ಕೃಷಿಗೆ ಅನೇಕ ರಾಜ್ಯಗಳ ಅನುಮೋದನೆ: ನಳಿನ್ ಕುಮಾರ್ ಕಟೀಲು

ಬೆಂಗಳೂರು, ಡಿ.21: ಅನೇಕ ರಾಜ್ಯಗಳು ಈಗಾಗಲೆ ಗುತ್ತಿಗೆ ಕೃಷಿಯನ್ನು ಅನುಮೋದಿಸಿವೆ. ಅನೇಕ ರಾಜ್ಯಗಳು ಕಾಂಟ್ರಾಕ್ಟ್ ಫಾರ್ಮಿಂಗ್ ಕಾನೂನುಗಳನ್ನು ಹೊಂದಿದ್ದು, ಕೇಂದ್ರ ಸರಕಾರದ ವತಿಯಿಂದ ಸ್ಥೂಲವಾಗಿ ಗುತ್ತಿಗೆ ಕೃಷಿ ಮತ್ತು ಕಾನೂನುಗಳನ್ನು ಅಧ್ಯಯನ ಮಾಡಿಯೇ, ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಟ್ವಿಟ್ ಮಾಡಿದ್ದಾರೆ.
ಯಾವುದೆ ತರಹದ ವಿವಾದಗಳನ್ನು ಬಗೆಹರಿಸಲು ರೈತರಿಗೆ ನ್ಯಾಯಾಲಯಕ್ಕೆ ಹೋಗುವ ಅವಕಾಶ ಇರಲಿದೆ. ರಾಜ್ಯಗಳಿಗೆ ಕೃಷಿ ಒಪ್ಪಂದಗಳನ್ನು ನೋಂದಣಿ ಮಾಡಿಕೊಳ್ಳುವ ಅಧಿಕಾರವಿರುತ್ತದೆ. ಇದರಿಂದ, ಗ್ರಾಹಕ ಮತ್ತು ರೈತರಿಬ್ಬರೂ ಕಾನೂನಿನ ಚೌಕಟ್ಟಿನೊಳಗೆ ವ್ಯವಹರಿಸುವುದು ಸಾಧ್ಯವಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
Next Story





