ಮಹಾರಾಷ್ಟ್ರದಲ್ಲಿ ಹೆಣ್ಣುಮಕ್ಕಳ ಜನನ ಪ್ರಮಾಣ ಕುಸಿತ
ಪಿಸಿ-ಪಿಎನ್‌ಡಿಟಿ ಕಾಯ್ದೆಯ ಕಠಿಣ ಜಾರಿಗೆ ಸೂಚನೆ

ಮುಂಬೈ,ಡಿ.21: ಹೆಣ್ಣು ಭ್ರೂಣ ಹತ್ಯೆಯನ್ನು ತಡೆಯುವ ಉದ್ದೇಶದೊಂದಿಗೆ ಲಿಂಗ ನಿರ್ಧಾರ ಪರೀಕ್ಷೆಗಳನ್ನು ನಿಷೇಧಿಸಿರುವ ಲಿಂಗ ಆಯ್ಕೆ ನಿಷೇಧ ಕಾಯ್ದೆ (ಗರ್ಭ ಪೂರ್ವ ಮತ್ತು ಪ್ರಸವ ಪೂರ್ವ ಲಿಂಗ ನಿರ್ಧಾರ ಕಾಯ್ದೆ-ಪಿಸಿ-ಪಿಎನ್‌ಡಿಟಿ)ಯನ್ನು ಇನ್ನಷ್ಟು ಕಠಿಣವಾಗಿ ಜಾರಿಗೊಳಿಸುವಂತೆ ಮಹಾರಾಷ್ಟ್ರ ಸರಕಾರವು ಎಲ್ಲ ಜಿಲ್ಲ್ಲಾ ಆರೋಗ್ಯಾಧಿಕಾರಿಗಳಿಗೆ ಸೂಚಿಸಿದೆ.
ಮಹಾರಾಷ್ಟ್ರದಲ್ಲಿ ಲಿಂಗಾನುಪಾತ ಗಣನೀಯ ಪ್ರಮಾಣದಲ್ಲಿ ಕುಸಿದಿದೆ ಎಂದು ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ (ಎನ್‌ಎಫ್‌ಎಚ್‌ಎಸ್)ಯು ಕೆಲವು ದಿನಗಳ ಹಿಂದೆ ಬೆಟ್ಟು ಮಾಡಿತ್ತು.
Next Story





