Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಆರೋಗ್ಯ
  4. ಅನಾನಸ್‌ನ ಆರೋಗ್ಯಲಾಭಗಳು ನಿಮಗೆ...

ಅನಾನಸ್‌ನ ಆರೋಗ್ಯಲಾಭಗಳು ನಿಮಗೆ ಗೊತ್ತಿರಲಿ

ವಾರ್ತಾಭಾರತಿವಾರ್ತಾಭಾರತಿ22 Dec 2020 12:34 AM IST
share
ಅನಾನಸ್‌ನ ಆರೋಗ್ಯಲಾಭಗಳು ನಿಮಗೆ ಗೊತ್ತಿರಲಿ

ನೀವು ಅನಾನಸ್ ಹಣ್ಣನ್ನು ತಿನ್ನುತ್ತೀರಾ? ಇಲ್ಲವಾದರೆ ನೀವು ಈ ಅದ್ಭುತ ಫಲವು ನೀಡುವ ಹಲವಾರು ಆರೋಗ್ಯಲಾಭಗಳನ್ನು ಕಳೆದುಕೊಳ್ಳುತ್ತಿದ್ದೀರಿ ಎಂದೇ ಅರ್ಥ. ಗೊಂದಲವಾಗುತ್ತಿದೆಯೇ? ಈ ಜಗತ್ತಿನಲ್ಲಿಯ ಎಲ್ಲ ಹಣ್ಣುಗಳು ಒಂದಲ್ಲೊಂದು ಲಾಭಗಳನ್ನು ನೀಡುತ್ತವೆ. ಸೇಬು ನಮ್ಮ ಆರೋಗ್ಯಕ್ಕೆ ಅತ್ಯುತ್ತಮ ಎಂದು ನಾವು ಪರಿಗಣಿಸಿದ್ದೇವೆ. ಅದೇ ರೀತಿ ಇತರ ಹಣ್ಣುಗಳೂ ಕೆಲವು ಆರೋಗ್ಯಲಾಭಗಳನ್ನು ಹೊಂದಿವೆ. ಋತುಮಾನಕ್ಕೆ ಅನುಗುಣವಾಗಿ ದೊರೆಯುವ ಮಾವಿನಂತಹ ಹಣ್ಣುಗಳು ತಮ್ಮದೇ ಆದ ಪ್ರಾಮುಖ್ಯತೆಯನ್ನು ಹೊಂದಿವೆ,ಆದರೆ ವರ್ಷವಿಡೀ ದೊರೆಯುವ ಅನಾನಸ್‌ನಂತಹ ಹಣ್ಣುಗಳು ನಮ್ಮ ಆರೋಗ್ಯದ ಮೇಲೆ ಮಹತ್ವದ ಪರಿಣಾಮವನ್ನು ಹೊಂದಿವೆ. ಅನಾನಸ್ ಹಣ್ಣು ನಮಗೆ ನೀಡುವ ಆರೋಗ್ಯಲಾಭಗಳ ಕುರಿತು ಮಾಹಿತಿಯಿಲ್ಲಿದೆ......

* ಪೋಷಕಾಂಶಗಳು

ಅನಾನಸ್ ಕಡಿಮೆ ಕ್ಯಾಲೊರಿಗಳನ್ನು ಒಳಗೊಂಡಿದೆ. ಅದು ಸಿಹಿಯಾಗಿರಬಹುದು,ಆದರೆ ಅದನ್ನು ಸೇವಿಸುವದು ಹೆಚ್ಚುವರಿ ಕ್ಯಾಲೊರಿಗಳನ್ನು ನೀಡುವುದಿಲ್ಲ. ವಿಟಾಮಿನ್ ಸಿ ಮತ್ತು ಬಿ6, ತಾಮ್ರ,ಮ್ಯಾಂಗನೀಸ್,ಪೊಟ್ಯಾಷಿಯಂ,ಕಬ್ಬಿಣ ಇತ್ಯಾದಿಗಳು ಸೇರಿದಂತೆ ನಮ್ಮ ಶರೀರಕ್ಕೆ ಅಗತ್ಯವಾಗಿರುವ ಹಲವಾರು ಪೋಷಕಾಂಶಗಳು ಈ ಹಣ್ಣಿನಲ್ಲಿವೆ. ಇವುಗಳ ಜೊತೆಗೆ ವಿಟಾಮಿನ್ ಎ ಮತ್ತು ಕೆ,ರಂಜಕ,ಕ್ಯಾಲ್ಸಿಯಂ ಕೂಡ ಅಲ್ಪಪ್ರಮಾಣದಲ್ಲಿವೆ. ಅನಾನಸ್‌ನಲ್ಲಿ ವಿಟಾಮಿನ್ ಸಿ ಸಮೃದ್ಧವಾಗಿದ್ದು,ನಮ್ಮ ದೈನಂದಿನ ಅಗತ್ಯವನ್ನು ಸಂಪೂರ್ಣವಾಗಿ ಒದಗಿಸುತ್ತದೆ.

* ಉತ್ಕರ್ಷಣ ನಿರೋಧಕಗಳು

ಕೊರೋನ ವೈರಸ್ ಸಾಂಕ್ರಾಮಿಕದಿಂದಾಗಿ ಈಗ ಉತ್ಕರ್ಷಣ ನಿರೋಧಕಗಳ ಮಹತ್ವ ಹೆಚ್ಚಿನ ಜನರಿಗೆ ತಿಳಿದಿದೆ. ಅನಾನಸ್‌ನಲ್ಲಿ ಅಧಿಕ ಪ್ರಮಾಣದಲ್ಲಿರುವ ಉತ್ಕರ್ಷಣ ನಿರೋಧಕಗಳು ಉತ್ಕರ್ಷಕ ಒತ್ತಡದ ವಿರುದ್ಧ ಹೋರಾಡುವ ಮೂಲಕ ಹಲವಾರು ದೀರ್ಘಕಾಲಿಕ ಕಾಯಿಲೆಗಳ ಅಪಾಯವನ್ನು ದೂರ ಮಾಡುತ್ತವೆ. ಅನಾನಸ್ ಸೇವನೆಯು ನಮ್ಮ ಶರೀರಕ್ಕೆ ಹೆಚ್ಚಿನ ಹಾನಿಯನ್ನುಂಟು ಮಾಡುವ ಫ್ರೀ ರ್ಯಾಡಿಕಲ್‌ಗಳ ವಿರುದ್ಧ ಹೋರಾಟಕ್ಕೆ ನೆರವಾಗುತ್ತದೆ.

* ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ

ಅನಾನಸ್ ಸೇವನೆಯು ಮೇದೋಜ್ಜೀರಕ ಗ್ರಂಥಿಯ ಕಿಣ್ವಗಳ ಕೊರತೆಯಿಂದ ಬಳಲುತ್ತಿರುವವರಿಗೆ ವಿಶೇಷ ಲಾಭವನ್ನು ನೀಡುತ್ತದೆ. ಮೇದೋಜ್ಜೀರಕ ಗ್ರಂಥಿಯು ಆಹಾರವನ್ನು ವಿಭಜಿಸಲು ಸಾಕಷ್ಟು ಜೀರ್ಣ ಕಿಣ್ವಗಳನ್ನು ಉತ್ಪಾದಿಸದಿದ್ದಾಗ ಈ ಸ್ಥಿತಿಯು ಉಂಟಾಗುತ್ತದೆ. ಬ್ರೋಮಲೇನ್ ಕಿಣ್ವವು ಆಹಾರಗಳ ವಿಭಜನೆಯಲ್ಲಿ ಪ್ರಮುಖ ಪಾತ್ರವನ್ನು ಹೊಂದಿದೆ. ಅನಾನಸ್ ತಿನ್ನುವುದರಿಂದ ಬ್ರೋಮಲೇನ್ ಗುಂಪಿನ ಕಿಣ್ವಗಳು ನಮ್ಮ ಶರೀರಕ್ಕೆ ದೊರೆಯುತ್ತವೆ ಮತ್ತು ಜೀರ್ಣಾಂಗವನ್ನು ಸುಸ್ಥಿತಿಯಲ್ಲಿರಿಸುತ್ತವೆ. ನೀವು ಮಾಂಸವನ್ನು ಸೇವಿಸಿದ್ದರೆ ಅನಾನಸ್ ಅನ್ನು ಅಗತ್ಯವಾಗಿ ತಿನ್ನಬೇಕು.

* ಅಧಿಕ ನಾರು

ನಿಮಗೆ ಹೊಟ್ಟೆಯುಬ್ಬರ ಮತ್ತು ಮಲಬದ್ಧತೆ ಕಾಡುತ್ತಿದ್ದರೆ, ಸರಿಯಾಗಿ ಮಲ ವಿಸರ್ಜಿಸಲು ಸಾಧ್ಯವಾಗದಿದ್ದರೆ ಅನಾನಸ್ ತಿಂದು ನೋಡಿ. ಬಾಳೆಹಣ್ಣು ಮಾತ್ರವಲ್ಲ,ಅನಾನಸ್ ಕೂಡ ಅಧಿಕ ಪ್ರಮಾಣದಲ್ಲಿ ನಾರನ್ನು ಒಳಗೊಂಡಿದೆ. ನಾರು ಶರೀರದಿಂದ ತ್ಯಾಜ್ಯಗಳ ಸುಗಮ ನಿರ್ಮೂಲನಕ್ಕೆ ನೆರವಾಗುವ ಮೂಲಕ ಹೊಟ್ಟೆಯ ಆರೋಗ್ಯವನ್ನು ಹೆಚ್ಚಿಸುತ್ತದೆ.

* ನಿರೋಧಕತೆ ಹೆಚ್ಚಿಸುತ್ತದೆ

 ಪ್ರತಿದಿನ ಸ್ವಲ್ಪ ಅನಾನಸ್ ತಿನ್ನುವ ಮೂಲಕ ಋತುಮಾನಕ್ಕೆ ಅನುಗುಣವಾದ ಮತ್ತು ವೈರಲ್ ಸೋಂಕುಗಳು ಹಾಗೂ ಅಲರ್ಜಿಗಳಿಂದ ದೂರವಿರಬಹುದು. ಅನಾನಸ್‌ನಲ್ಲಿರುವ ಹಲವಾರು ಪೋಷಕಾಂಶಗಳಿಂದಾಗಿ ಅದು ನಮ್ಮ ಶರಿರದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಅನಾನಸ್‌ನ ನಿಯಮಿತ ಸೇವನೆಯು ರೋಗಗಳ ವಿರುದ್ಧ ಹೋರಾಡುವ ಬಿಳಿಯ ರಕ್ತಕಣಗಳನ್ನು ಹೆಚ್ಚಿಸುತ್ತದೆ ಎನ್ನುವುದು ಅಧ್ಯಯನಗಳಿಂದ ಬೆಳಕಿಗೆ ಬಂದಿದೆ. ಈ ಹಣ್ಣು ಉರಿಯೂತ ನಿರೋಧಕ ಗುಣವನ್ನೂ ಹೊಂದಿದೆ. ಇದು ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಉರಿಯೂತದಿಂದ ಉಂಟಾಗುವ ದೀರ್ಘಕಾಲಿಕ ರೋಗಗಳನ್ನು ತಡೆಯಲು ನೆರವಾಗುತ್ತದೆ.

* ಸಂಧಿವಾತದ ಲಕ್ಷಣಗಳನ್ನು ತಗ್ಗಿಸಬಹುದು

ಜಗತ್ತಿನಲ್ಲಿ ಕೋಟ್ಯಂತರ ಜನರು ಸಂಧಿವಾತದಿಂದ ನರಳುತ್ತಿದ್ದಾರೆ. ಇದು ಸಂದುಗಳಲ್ಲಿ ಉರಿಯೂತ,ನೋವು,ಪೆಡಸುತನ ಅಥವಾ ಮೃದುತ್ವವನ್ನುಂಟು ಮಾಡುತ್ತದೆ. ಇದರಿಂದಾಗಿ ರೋಗಿಯು ಕ್ರಿಯಾಶೀಲ ಬದುಕು ನಡೆಸಲು ಸಾಧ್ಯವಾಗುವುದಿಲ್ಲ. ಉರಿಯೂತ ಇಂತಹ ರೋಗಿಗಳಲ್ಲಿ ಪ್ರಮುಖ ಲಕ್ಷಣವಾಗಿರುತ್ತದೆ. ಅನಾನಸ್‌ನಲ್ಲಿರುವ ಬ್ರೋಮ್‌ಲೇನ್ ಪ್ರಬಲ ಉರಿಯೂತ ನಿರೋಧಕವೂ ಆಗಿದೆ ಮತ್ತು ಎಲ್ಲ ವಿಧಗಳ ಸಂಧಿವಾತಗಳ ಲಕ್ಷಣಗಳನ್ನು ಶಮನಿಸುತ್ತದೆ.

* ಶಸ್ತ್ರಚಿಕಿತ್ಸೆಯ ಬಳಿಕ ಚೇತರಿಕೆಯನ್ನು ಉತ್ತೇಜಿಸುತ್ತದೆ

ಇತ್ತೀಚಿಗೆ ಶಸ್ತ್ರಚಿಕಿತ್ಸೆಗೊಳಗಾದವರಿಗೆ ಶೀಘ್ರ ಚೇತರಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಇಂತಹವರು ಪ್ರತಿದಿನ ಅನಾನಸ್ ತಿನ್ನುವುದರಿಂದ ಚೇತರಿಕೆ ಪ್ರಕ್ರಿಯೆಯು ಚುರುಕು ಪಡೆದುಕೊಳ್ಳುತ್ತದೆ. ಅದರಲ್ಲಿರುವ ಉರಿಯೂತ ನಿರೋಧಕ ಪೋಷಕಾಂಶಗಳು ಇದನ್ನು ಸಾಧ್ಯವಾಗಿಸುತ್ತವೆ.

* ಕ್ಯಾನ್ಸರ್‌ನ ಅಪಾಯವನ್ನು ತಗ್ಗಿಸಬಹುದು

ಈಗಾಗಲೇ ಹೇಳಿರುವಂತೆ ಅನಾನಸ್‌ನ ಉತ್ಕರ್ಷಣ ನಿರೋಧಕ ಗುಣಗಳು ದೀರ್ಘಾವಧಿಯ ಕಾಯಿಲೆಗಳನ್ನು ತಡೆಯಲು ನೆರವಾಗುತ್ತವೆ. ಕ್ಯಾನ್ಸರ್ ಜೀವಕೋಶಗಳ ಅನಿಯಂತ್ರಿತ ವೃದ್ಧಿಯಿಂದ ಉಂಟಾಗುವ ಟ್ಯೂಮರ್ ಆಗಿದೆ. ದೀರ್ಘಕಾಲಿಕ ಉರಿಯೂತ ಮತ್ತು ಫ್ರೀ ರ್ಯಾಡಿಕಲ್‌ಗಳಿಂದ ಆಗುವ ಹಾನಿ ಈ ಸ್ಥಿತಿಯನ್ನುಂಟು ಮಾಡುತ್ತದೆ. ಉತ್ಕರ್ಷಣ ನಿರೋಧಕ ಸಂಯುಕ್ತಗಳು ಮತ್ತು ಉರಿಯೂತ ನಿರೋಧಕ ಕಿಣ್ವಗಳಿಂದ ಸಮೃದ್ಧವಾಗಿರುವ ಅನಾನಸ್ ತಿನ್ನುವುದರಿಂದ ಕ್ಯಾನ್ಸರ್ ವಿರುದ್ಧ ಹೋರಾಡಬಹುದು. ಈ ಹಣ್ಣಿನಲ್ಲಿರುವ ಬ್ರೋಮ್‌ಲೇನ್ ಕಿಣ್ವವು ಶರೀರದ ವಿವಿಧ ಭಾಗಗಳಲ್ಲಿ ಕ್ಯಾನ್ಸರ್‌ಕಾರಕ ಕೋಶಗಳ ಬೆಳವಣಿಗೆಯನ್ನು ತಡೆಯುತ್ತದೆ. ಈ ಹಣ್ಣನ್ನು ತಿನ್ನುವುದರಿಂದ ರೋಗ ನಿರೋಧಕ ಶಕ್ತಿಯು ಬಲಗೊಳ್ಳುತ್ತದೆ ಮತ್ತು ಬಿಳಿರಕ್ತಕಣಗಳ ಉತ್ಪಾದನೆ ಹೆಚ್ಚುತ್ತದೆ. ಇವೆಲ್ಲವೂ ಕ್ಯಾನ್ಸರ್‌ನ ಅಪಾಯವನ್ನು ತಗ್ಗಿಸಲು ನೆರವಾಗುತ್ತವೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X