Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಅಂತಾರಾಷ್ಟ್ರೀಯ
  4. ಕೇಮ್ಯಾನ್ ದ್ವೀಪದಲ್ಲಿ 350 ಮಿಲಿಯನ್...

ಕೇಮ್ಯಾನ್ ದ್ವೀಪದಲ್ಲಿ 350 ಮಿಲಿಯನ್ ಡಾಲರ್ ವೆಚ್ಚದ ಮೆಡಿಸಿಟಿ ನಿರ್ಮಿಸಲಿರುವ ಆ್ಯಸ್ಟರ್ ಹೆಲ್ತ್ ಕೇರ್

ವಾರ್ತಾಭಾರತಿವಾರ್ತಾಭಾರತಿ22 Dec 2020 11:31 AM IST
share
ಕೇಮ್ಯಾನ್ ದ್ವೀಪದಲ್ಲಿ 350 ಮಿಲಿಯನ್ ಡಾಲರ್ ವೆಚ್ಚದ ಮೆಡಿಸಿಟಿ ನಿರ್ಮಿಸಲಿರುವ ಆ್ಯಸ್ಟರ್ ಹೆಲ್ತ್ ಕೇರ್

ಕೇರಳ ಮೂಲದ ಖ್ಯಾತ ವೈದ್ಯ, ಉದ್ಯಮಿ ಆಝಾನ್ ಮೂಪನ್ ಅವರು ಅಧ್ಯಕ್ಷ ಹಾಗೂ ಆಡಳಿತ ನಿರ್ದೇಶಕರಾಗಿರುವ ದುಬೈಯ ಆ್ಯಸ್ಟರ್ ಡಿಎಂ ಹೆಲ್ತ್ ಕೇರ್ ಸಂಸ್ಥೆ  ಬ್ರಿಟಿಷ್ ಸಾಗರೋತ್ತರ ಪ್ರಾಂತ್ಯವಾಗಿರುವ ಕೇಮೆನ್ ದ್ವೀಪಸಮೂಹದ ಅತ್ಯಂತ ದೊಡ್ಡ ದ್ವೀಪವಾದ ಗ್ರ್ಯಾಂಡ್ ಕೇಮ್ಯಾನ್ನಲ್ಲಿ 350 ಮಿಲಿಯನ್ ಡಾಲರ್  ವೆಚ್ಚದ  500 ಹಾಸಿಗೆಗಳ ಅತ್ಯಾಧುನಿಕ ಸೌಲಭ್ಯಗಳಿರುವ ಆಸ್ಪತ್ರೆಯನ್ನು ಸ್ಥಾಪಿಸಲಿದೆ. ಈ  ನಿಟ್ಟಿನಲ್ಲಿ ಅಲ್ಲಿ ಆ್ಯಸ್ಟರ್ ಕೇಮ್ಯಾನ್ ಮೆಡಿಸಿಟಿ ನಿರ್ಮಾಣಕ್ಕಾಗಿ ಕೇಮ್ಯಾನ್ ಐಲ್ಯಾಂಡ್ಸ್ ಸರಕಾರವು ಆ್ಯಸ್ಟರ್ ಸಂಸ್ಥೆಯ ಜತೆ ಒಪ್ಪಂದಕ್ಕೆ ಬಂದಿದೆ.

ಮುಂದಿನ ಹಲವಾರು ವರ್ಷಗಳಲ್ಲಿ ಹಂತ ಹಂತವಾಗಿ ನಿರ್ಮಾಣಗೊಳ್ಳರುವ ಈ ಅತ್ಯಾಧುನಿಕ ಮೆಡಿಸಿಟಿಯಲ್ಲಿ ಆಸ್ಪತ್ರೆಯ ಹೊರತಾಗಿ, ವೈದ್ಯಕೀಯ ವಿವಿ ಹಾಗೂ ಅಸಿಸ್ಟೆಡ್ ಲಿವಿಂಗ್ ಸೌಲಭ್ಯವೂ ಇರಲಿದೆ. ಇಲ್ಲಿ ನಿರ್ಮಾಣವಾಗಲಿರುವ ಆಸ್ಪತ್ರೆ ಸ್ಥಳೀಯರಿಗೆ ಹೊರತಾಗಿ ಮೆಡಿಕಲ್ ಟೂರಿಸ್ಟ್ ಗಳಿಗೆ ಆರೋಗ್ಯ ಸೇವೆಗಳನ್ನು ಒದಗಿಸಲಿದೆ. "ಮೊದಲ ಹಂತದ ಭಾಗವಾಗಿ 150 ಹಾಸಿಗೆಗಳ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಗೊಳ್ಳಲಿದೆ. ಮುಂದಿನ ಮೂರರಿಂದ ನಾಲ್ಕು ವರ್ಷಗಳೊಗಾಗಿ ಮೊದಲ ಹಂತದ ಕಾಮಗಾರಿ ಮುಗಿದು ಆಸ್ಪತ್ರೆ ಕಾರ್ಯಾರಂಭಿಸಲಿದೆ,'' ಎಂದು ಆ್ಯಸ್ಟರ್ ಡಿಎಂ ಹೆಲ್ತ್ ಕೇರ್ ಸ್ಥಾಪಕ ಡಾ. ಆಝಾನ್ ಮೂಪನ್ ಹೇಳಿದ್ದಾರೆ.

ಅಮೆರಿಕ, ಕೆನಡಾ ಹಾಗೂ ಕೆರಿಬಿಯನ್ ದ್ವೀಪಗಳಿಂದ  ಸಾಗರೋತ್ತರ ದೇಶಗಳಿಗೆ ಪ್ರತಿ ವರ್ಷ ಆರೋಗ್ಯ ಸೇವೆಗಳಿಗಾಗಿ ತೆರಳುವ 14 ಲಕ್ಷ ಮೆಡಿಕಲ್ ಟೂರಿಸ್ಟ್ ಗಳನ್ನು ದೃಷ್ಟಿಯಲ್ಲಿರಿಸಿ ಈ ಯೋಜನೆ ಕೈಗೆತ್ತಿಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.

(ಆ್ಯಸ್ಟರ್ ಡಿಎಂ ಹೆಲ್ತ್ ಕೇರ್ ಸ್ಥಾಪಕ ಡಾ. ಆಝಾನ್ ಮೂಪನ್)

ಯೋಜನೆಯ ಎರಡನೇ ಹಂತವು ಆಸ್ಪತ್ರೆ ಕಾರ್ಯಾರಂಭಗೊಂಡ ಮೂರು ವರ್ಷಗಳ ನಂತರ ಕೈಗೆತ್ತಿಕೊಳ್ಳಲಾಗುವುದು ಹಾಗೂ ಅಸಿಸ್ಟೆಡ್ ಹಾಗೂ ಸ್ವತಂತ್ರ ಜೀವನ ನಡೆಸುವ ಸವಲತ್ತುಗಳನ್ನು ಒದಗಿಸಲಾಗುವುದು ಹಾಗೂ ಪ್ರತಿ ಕಟ್ಟಡದಲ್ಲಿ 100 ಮನೆಗಳಿರಲಿವೆ.

ಮೂರನೇ ಹಂತದಲ್ಲಿ ವೈದ್ಯಕೀಯ ವಿಶ್ವವಿದ್ಯಾಲಯ ನಿರ್ಮಾಣದ ಜತೆಗೆ ಮೊದಲ ಹಂತದಲ್ಲಿ ನಿರ್ಮಾಣವಾಗಿರುವ ಆಸ್ಪತ್ರೆಯನ್ನು 500 ಹಾಸಿಗೆಗಳ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಲಾಗುವುದು. ಮೊದಲ ಹಂತದ ಆಸ್ಪತ್ರೆ ಕಾರ್ಯಾರಂಭಗೊಂಡ ಏಳು ವರ್ಷಗಳ ನಂತರ ಮೂರನೇ ಹಂತದ ಕಾಮಗಾರಿ ಆರಂಭಗೊಳ್ಳಲಿದೆ.

ತಮ್ಮ ಸಂಸ್ಥೆಗೆ ಏಷ್ಯಾ ಹಾಗೂ ಮಧ್ಯಪೂರ್ವ ದೇಶಗಳ ಹೊರತಾಗಿ ಬೇರೆ ದೇಶಗಳಿಗೆ ವಿಸ್ತರಿಸುವ ಉದ್ದೇಶವಿದೆ ಎಂದು ಅವರು ಹೇಳಿದ್ದಾರೆ.

ಆ್ಯಸ್ಟರ್ ಮೆಡಿಸಿಟಿ ಈಗಾಗಲೇ ಕೇರಳದ ಕೊಚ್ಚಿಯಲ್ಲಿದ್ದು, ಕೇಮ್ಯಾನ್ ದ್ವೀಪದಲ್ಲಿ ನಿರ್ಮಾಣವಾಗಲಿರುವ ಮೆಡಿಸಿಟಿ ಸಂಸ್ಥೆಯ ಎರಡನೇ ಮೆಡಿಸಿಟಿಯಾಗಲಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X