ಮಲ್ನಾಡ್ ಗಲ್ಫ್ ಅಸೋಸಿಯೇಶನ್ ಹಾಸನ ವಲಯ ಜಿಲ್ಲಾಧ್ಯಕ್ಷರಾಗಿ ಹಸೈನಾರ್ ಆನೆಮಹಲ್ ಆಯ್ಕೆ

ಹಾಸನ, ಡಿ.22: ಮಲ್ನಾಡ್ ಗಲ್ಫ್ ಅಸೋಸಿಯೇಶನ್ ಇದರ ಹಾಸನ ವಲಯ ಜಿಲ್ಲಾಧ್ಯಕ್ಷರಾಗಿ ಹಸೈನಾರ್ ಆನೆಮಹಲ್ ಆಯ್ಕೆಯಾಗಿದ್ದಾರೆ.
ಪದಾಧಿಕಾರಿಗಳ ಆಯ್ಕೆಯು ಇತ್ತೀಚೆಗೆ ಆನ್‌ಲೈನ್ ಮೂಲಕ ನಡೆಯಿತು.
ಗೌರವಾಧ್ಯಕ್ಷರಾಗಿ ಜಮಾಲ್ ಬೇಲೂರು, ಉಪಾಧ್ಯಕ್ಷರಾಗಿ ಫಾರೂಕ್ ಶಾಮಿಯಾನ ಸಕಲೇಶಪುರ, ಮುಹಮ್ಮದ್ ಆರಿಫ್ ಹಾಸನ, ಪ್ರಧಾನ ಕಾರ್ಯದರ್ಶಿಯಾಗಿ ಮುಹಮ್ಮದ್ ಸಲೀಂ ಹಾಸನ, ಸಹ ಕಾರ್ಯದರ್ಶಿಗಳಾಗಿ ಪರ್ವೀಝ್ ನೂರಿ ಅರಸಿಕೇರೆ, ಅಬ್ದುಲ್ ಮುಝಮ್ಮಿಲ್ ಹಾಸನ, ಖಜಾಂಚಿಯಾಗಿ ಆಸಿಫ್ ರೋಶನ್, ಜಿಲ್ಲಾ ಸಂಚಾಲಕರಾಗಿ ಮಲ್ನಾಡ್ ಮೆಹಬೂಬ್, ಕಾನೂನು ಸಲಹೆಗಾರರಾಗಿ ಹನ್ಶದ್ ಪಾಳ್ಯ ಆಯ್ಕೆಯಾದರು.
ಮಲ್ನಾಡ್ ಗಲ್ಫ್ ಅಸೋಸಿಯೇಶನ್ ಕೇಂದ್ರ ಸಮಿತಿಯ ಅಧ್ಯಕ್ಷ ಮುಹಮ್ಮದ್ ಶರೀಫ್, ಗೌರವಾಧ್ಯಕ್ಷ ಬಶೀರ್ ಬಾಳ್ಳುಪೇಟೆ, ಸಲಹೆಗಾರ ಮುಹಮ್ಮದ್ ಫಾರೂಕ್, ಜುಬೈಲ್ ವಲಯಾಧ್ಯಕ್ಷ ಅಹ್ಮದ್ ಶಮೀಮ್, ರಿಯಾದ್ ವಲಯಾಧ್ಯಕ್ಷ ಜುನೈದ್ ಇಸ್ಮಾಯೀಲ್, ಜಿದ್ದಾ ವಲಯಾಧ್ಯಕ್ಷ ಮುಷ್ತಾಕ್ ಅಹ್ಮದ್, ದಮ್ಮಾಮ್ ವಲಯ ಸಮಿತಿ ಖಜಾಂಚಿ ಅಬೂಬಕರ್ ಸಿದ್ದೀಕ್ ಬೇಲೂರು, ಕೇಂದ್ರ ಸಮಿತಿಯ ಹಾಸನ ಜಿಲ್ಲಾ ಸಂಚಾಲಕರುಗಳಾದ ಸಮೀರ್ ಹಾಸನ - ರಿಯಾದ್, ಜಲಾಲ್ ಬೇಗ್ ಸಕಲೇಶಪುರ – ಜಿದ್ದಾ ಅವರು ನೂತನ ಸಮಿತಿಗೆ ಶುಭಾಶಯ ಕೋರಿದರು.
ಸಮೀರ್ ಸ್ವಾಗತಿಸಿದರು. ಬಶೀರ್ ಬಾಳ್ಳುಪೇಟೆ ಸಂಸ್ಥೆಯ ಪರಿಚಯ ನೀಡಿದರು. ಮಹಮ್ಮದ್ ಶರೀಫ್ ನಿಬ್ಜಿ ಪ್ರಾರ್ಥಿಸಿದರು. ಖಲಂದರ್ ಶಾಫಿ ಜೈನಿ ಕಾರ್ಯಕ್ರಮ ನಿರೂಪಿಸಿದರು. ಜಲಾಲ್ ಬೇಗ್ ವಂದಿಸಿದರು.







