ಬಂಟ್ವಾಳ ತಾಲೂಕಿನಲ್ಲಿ ಶೇ.51.72 ಮತದಾನ

ಬಂಟ್ವಾಳ, ಡಿ.22: ತಾಲೂಕಿನಲ್ಲಿ ಗ್ರಾಮ ಪಂಚಾಯತ್ ಚುನಾವಣೆ ಬಿರುಸಿನಿಂದ ಮುಂದುವರಿದಿದ್ದು, ಮಧ್ಯಾಹ್ನ 1 ಗಂಟೆಯ ಸುಮಾರಿಗೆ 51.72 ಶೇಕಡ ಮತದಾನವಾಗಿದೆ ಎಂದು ತಾಲೂಕು ಆಡಳಿತದ ಪ್ರಕಟನೆ ತಿಳಿಸಿದೆ.
ಬೆಳಗ್ಗೆ 9 ಗಂಟೆಯ ವೇಳೆಗೆ ತಾಲೂಕಿನಲ್ಲಿ 16.69 ಶೇಕಡ ಮತದಾನವಾಗಿತ್ತು. 11 ಗಂಟೆಯ ವೇಳೆಗೆ 34.93 ಶೇಕಡ ಮತದಾನವಾಗಿದೆ.
ತಾಲೂಕಿನ ಯಾವುದೇ ಮತಗಟ್ಟೆಯಲ್ಲಿ ಯಾವುದೇ ಲೋಪದೋಷ ಇಲ್ಲದೆ ಶಾಂತಿಯುತವಾಗಿ ಮತದಾನ ಪ್ರಕ್ರಿಯೆ ಮುಂದುವರಿದಿದೆ.
Next Story





