ಮಹಿಳೆಯ ಸರ ಸುಲಿಗೆಗೆ ಯತ್ನ
ಕಾರ್ಕಳ, ಡಿ.22: ಪಳ್ಳಿ ಹೊಸ ಸೇತುವೆ ರಸ್ತೆ ಬದಿಯಲ್ಲಿ ಮಾತನಾಡುತಿದ್ದ ಯುವತಿಯ ಕತ್ತಿನಲ್ಲಿದ್ದ ಸರವನ್ನು ಅಪರಿಚಿತ ವ್ಯಕ್ತಿಯೊಬ್ಬ ಸುಲಿಗೆ ಮಾಡಲು ಯತ್ನಿಸಿರುವ ಘಟನೆ ಡಿ.21ರಂದು ಸಂಜೆ ವೇಳೆ ನಡೆದಿದೆ.
ಪಳ್ಳಿ ಗ್ರಾಮದ ಕಲ್ಲಾಪು ನಿವಾಸಿ ವಿಜಯಶ್ರೀ(26) ಎಂಬವರು ತನ್ನ ಸಂಬಂದಿ ನವ್ಯ ಎಂಬವರೊಂದಿಗೆ ರಸ್ತೆ ಬದಿಯಲ್ಲಿ ನಿಂತು ಮಾತನಾಡುತ್ತಿ ದ್ದರೆ ನ್ನಲಾಗಿದೆ. ಆಗ ಸುಮಾರು 20 ರಿಂದ 25 ವರ್ಷ ವಯಸ್ಸಿನ ಅಪರಿಚಿತ ವ್ಯಕ್ತಿಯೊಬ್ಬ ಕೆಎ-20-ಇಡಬ್ಲು-1080ನೆ ನೊಂದಣಿ ಸಂಖ್ಯೆಯ ಬೈಕಿನಲ್ಲಿ ವಿಜಯಶ್ರೀ ಬಳಿಗೆ ಬಂದು ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಎಳೆಯಲು ಪ್ರಯತ್ನಿಸಿ ಪರಾರಿಯಾದನು ಎಂದು ದೂರಲಾಗಿದೆ.
ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story