ಪೊಲಿಪು ಖುವ್ವತ್ತುಲ್ ಇಸ್ಲಾಂ ಅಧ್ಯಕ್ಷರಾಗಿ ಬಶೀರ್ ಆಯ್ಕೆ
ಕಾಪು, ಡಿ. 22: ಪೊಲಿಪು ಖುವ್ವತ್ತುಲ್ ಇಸ್ಲಾಂ ಯಂಗ್‌ಮೆನ್ಸ್ ಅಸೋಸಿ ಯೇಶನ್‌ನ 2020-21ನೆ ಸಾಲಿನ ನೂತನ ಅಧ್ಯಕ್ಷರಾಗಿ ಬಶೀರ್ ಜನಪ್ರಿಯ ಆಯ್ಕೆಯಾದರು.
ಇತ್ತೀಚೆಗೆ ಕಾಪು ಜೇಸಿ ಭವನದಲ್ಲಿ ನಡೆದ ಸಂಸ್ಥೆಯ ಮಹಾಸಭೆಯಲ್ಲಿ ಈ ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಅಶ್ರಫ್, ಪ್ರಧಾನ ಕಾರ್ಯದರ್ಶಿ ಯಾಗಿ ಜಲೀಲ್, ಕೋಶಾಧಿಕಾರಿಯಾಗಿ ಅಝೀಝ್, ಜೊತೆ ಕಾರ್ಯದರ್ಶಿ ಯಾಗಿ ಶಬೀರ್ ಮತ್ತು ಬಾಶಿತ್, ಸಂಘಟನೆ ಕಾರ್ಯದರ್ಶಿಗಳಾಗಿ ಜಲೀಲ್, ರಜಬ್, ದಫ್ ಉಸ್ತುವಾರಿಯಾಗಿ ಸ್ವಾದಿಕ್, ಅಕ್ರಮ್ ಗುಡ್ ವಿಲ್, ಇಲ್ಯಾಸ್, ಸಲಹೆಗಾರರಾಗಿ ಎಚ್.ಹಸನ್, ಸದಸ್ಯರುಗಳಾಗಿ ರಝಾಕ್ ಕೆ.ಎಂ., ರಫೀಕ್ ಗಾರ್ಡನ್, ಹುಸೇನಾರ್, ರಜಬ್ ಉಮರಬ್ಬ, ಆರೀಫ್ ಕಲ್ಯಾ, ಮೊಹಮ್ಮದ್ ಹುಬ್ಳಿ, ಶೆರೀಫ್ ಕಲ್ಯಾ, ಬಶೀರ್ ಕರ್ನಾಟಕ, ಅಬ್ದುಲ್ ಮಜೀದ್, ಹಮೀದ್ ಪಾಂಗಳ, ನವಾಜ್ ಮಡಂಬು, ಮೊಹಮ್ಮದ್ ಶೇಕ್ ಅವರನ್ನು ಆಯ್ಕೆ ಮಾಡಲಾಯಿತು.
Next Story





