ಅಮೆರಿಕದ ಆರ್ಥಿಕ ಮಂಡಳಿಗೆ ಭಾರತೀಯ ಅಮೆರಿಕನ್ ಭರತ್ ರಾಮಮೂರ್ತಿ

ವಾಶಿಂಗ್ಟನ್, ಡಿ. 22: ಅಮೆರಿಕದ ನಿಯೋಜಿತ ಅಧ್ಯಕ್ಷ ಜೋ ಬೈಡನ್ ಸೋಮವಾರ ರಾಷ್ಟ್ರೀಯ ಆರ್ಥಿಕ ಮಂಡಳಿಗೆ ಭಾರತೀಯ ಅಮೆರಿಕನ್ ಸೇರಿದಂತೆ ಮೂವರು ನೂತನ ಸದಸ್ಯರನ್ನು ನೇಮಿಸಿದ್ದಾರೆ.
ಭರತ್ ರಾಮಮೂರ್ತಿ ರಾಷ್ಟ್ರೀಯ ಆರ್ಥಿಕ ಮಂಡಳಿಗೆ ನೇಮಿಸಲ್ಪಟ್ಟ ಭಾರತೀಯ ಅಮೆರಿಕನ್ ಆಗಿದ್ದಾರೆ.
ಭರತ್ ರಾಮಮೂರ್ತಿ ರೂಸ್‌ವೆಲ್ಟ್ ಇನ್‌ಸ್ಟಿಟ್ಯೂಟ್‌ನಲ್ಲಿ ಕಾರ್ಪೊರೇಟ್ ಪವರ್ ಪ್ರೋಗ್ರಾಮ್‌ನ ಆಡಳಿತ ನಿರ್ದೇಶಕರಾಗಿದ್ದಾರೆ. ಅವರನ್ನು ಎಪ್ರಿಲ್‌ನಲ್ಲಿ ಸೆನೆಟ್ ಅಲ್ಪಮತ ನಾಯಕ ಚಕ್ ಶೂಮರ್, ಕೇರ್ಸ್ ಕಾಯ್ದೆಗಾಗಿ ಸಂಸತ್ತಿನ ಮೇಲ್ವಿಚಾರಣಾ ಆಯೋಗದ ಸದಸ್ಯರಾಗಿ ನೇಮಿಸಿದ್ದರು.
Next Story





