Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಆರೋಗ್ಯ
  4. ಸುದೀರ್ಘ ವಿರಾಮದ ಬಳಿಕ ವ್ಯಾಯಾಮ...

ಸುದೀರ್ಘ ವಿರಾಮದ ಬಳಿಕ ವ್ಯಾಯಾಮ ಮಾಡುತ್ತಿದ್ದೀರಾ? ಅಡ್ಡ ಪರಿಣಾಮಗಳು ಮತ್ತು ನಿವಾರಣೆಯ ಬಗ್ಗೆ ನಿಮಗೆ ಗೊತ್ತಿರಲಿ

ವಾರ್ತಾಭಾರತಿವಾರ್ತಾಭಾರತಿ23 Dec 2020 12:35 AM IST
share
ಸುದೀರ್ಘ ವಿರಾಮದ ಬಳಿಕ ವ್ಯಾಯಾಮ ಮಾಡುತ್ತಿದ್ದೀರಾ? ಅಡ್ಡ ಪರಿಣಾಮಗಳು ಮತ್ತು ನಿವಾರಣೆಯ ಬಗ್ಗೆ ನಿಮಗೆ ಗೊತ್ತಿರಲಿ

ನೀವು ಸುದೀರ್ಘ ವಿರಾಮದ ಬಳಿಕ ವ್ಯಾಯಾಮವನ್ನು ಮತ್ತೆ ಆರಂಭಿಸಿದ್ದರೆ ಅಥವಾ ಜೀವನದಲ್ಲಿ ಮೊದಲ ಬಾರಿಗೆ ವ್ಯಾಯಾಮವನ್ನು ಮಾಡುತ್ತಿದ್ದರೆ ನಿಮ್ಮ ಅನುಭವ ಹಿತಕರವಂತೂ ಆಗಿರುವುದಿಲ್ಲ. ಇಂತಹ ಸಂದರ್ಭಗಳಲ್ಲಿ ಮಾಂಸಖಂಡಗಳಲ್ಲಿ ನೋವು ಅನೇಕ ಅಡ್ಡಪರಿಣಾಮಗಳಲ್ಲಿ ಕೇವಲ ಒಂದಾಗಿದೆ. ವ್ಯಾಯಾಮವನ್ನು ಮಾಡಿ ಅನುಭವವಿರುವವರಿಗೆ ಈ ಅಡ್ಡಪರಿಣಾಮಗಳನ್ನು ಎದುರಿಸುವುದು ಸುಲಭವಾಗಬಹುದು. ಆರಂಭವು ಹಿತಕರ ಎನ್ನಿಸದಿದ್ದರೂ ಕೇವಲ ಒಂದು ವಾರ ಅಥವಾ 15 ದಿನಗಳ ಬಳಿಕ ವ್ಯಾಯಾಮವು ನಿಮ್ಮನ್ನು ತಾಜಾ ಆಗಿರಿಸುತ್ತದೆ ಮತ್ತು ನಿಮ್ಮಲ್ಲಿ ಉತ್ಸಾಹ,ಶಕ್ತಿಯನ್ನು ತುಂಬುತ್ತದೆ.

 ವಿರಾಮದ ಬಳಿಕ ವ್ಯಾಯಾಮವನ್ನು ಪುನರಾರಂಭಿಸುತ್ತಿದ್ದರೆ ಅಥವಾ ಮೊದಲ ಬಾರಿಗೆ ವ್ಯಾಯಾಮ ಮಾಡುತ್ತಿದ್ದರೆ ಉಸಿರು ಖಾಲಿಯಾದ,ವಾಕರಿಕೆಯ,ತಲೆ ಹಗುರವಾದಂತೆ,ಮಾಂಸಖಂಡಗ ಳಲ್ಲಿ ಉರಿ,ಅತಿಯಾದ ಬೆವರು,ಬಾಯಾರಿಕೆ,ಬಾತ್‌ರೂಮ್‌ಗೆ ಹೋಗಬೇಕೆನ್ನುವ ತುಡಿತ,ಚರ್ಮದಲ್ಲಿ ತುರಿಕೆ,ಮೂಗಿನಲ್ಲಿ ನೀರಿಳಿಯುವುದು ಇವೆಲ್ಲ ಸಾಮಾನ್ಯವಾಗಿ ಕಂಡು ಬರುವ ಅಡ್ಡಪರಿಣಾಮಗಳ ಲಕ್ಷಣಗಳಾಗಿವೆ. ಇವುಗಳಲ್ಲದೆ ವ್ಯಾಯಾಮದ ಬಳಿಕ ಕೆಲವೊಮ್ಮೆ ಅತಿಯಾದ ಶಾರೀರಿಕ ನೋವು, ಮಾಂಸಖಂಡಗಳಲ್ಲಿ ನೋವು,ಅತಿಯಾದ ಆಯಾಸ, ತಲೆನೋವಿನಂತಹ ಲಕ್ಷಣಗಳೂ ಕಾಣಿಸಿಕೊಳ್ಳುತ್ತವೆ. ಆದರೆ ಈ ಲಕ್ಷಣಗಳನ್ನು ತಡೆಯಲು ಅಥವಾ ತಗ್ಗಿಸಲು ಹಲವಾರು ಪರಿಣಾಮಕಾರಿ ಕ್ರಮಗಳೂ ಇವೆ.

ವ್ಯಾಯಾಮದ ಸಂದರ್ಭದಲ್ಲಿ ವಾರ್ಮ್ ಅಪ್ ಮತ್ತು ಕೂಲ್ ಡೌನ್ ಪ್ರಕ್ರಿಯೆಗಳನ್ನು ತಪ್ಪದೆ ಕೈಗೊಳ್ಳಿ. ಜಿಮ್‌ಗೆ ಹೋಗುತ್ತಿದ್ದರೆ ಫೋಮ್ ರೋಲರ್ ಬಳಕೆಯನ್ನು ರೂಢಿಸಿಕೊಳ್ಳಿ.

ವ್ಯಾಯಾಮ ಮಾಡುವ ಮುನ್ನ ಮತ್ತು ಮಾಡಿದ ನಂತರ ಸಾಕಷ್ಟು ನೀರು ಸೇವಿಸಿ.

ವ್ಯಾಯಾಮ ಮಾಡುವಾಗ ತಲೆ ಸುತ್ತಿದಂತೆ ಅಥವಾ ತಲೆ ಹಗುರವಾದಂತೆ ಅನ್ನಿಸಿದರೆ ವ್ಯಾಯಾಮವನ್ನು ನಿಧಾನವಾಗಿ ಮಾಡಿ ಅಥವಾ ಸ್ವಲ್ಪ ಹೊತ್ತು ನಿಲ್ಲಿಸಿ. ನಿಮ್ಮ ತಾಕತ್ತು,ಕ್ಷಮತೆ,ನಮ್ಯತೆ ಮತ್ತು ಚಲನಶೀಲತೆಗೆ ಅನುಗುಣವಾದ ವೇಗದಲ್ಲಿ ವ್ಯಾಯಾಮವನ್ನು ಮಾಡಿ.

ವ್ಯಾಯಾಮ ಮಾಡುವ ಮುನ್ನ ಹೊಟ್ಟೆ ತುಂಬಾ ಆಹಾರ ಸೇವನೆಯನ್ನು ನಿವಾರಿಸಿ. ಒಂದು ವೇಳೆ ಅತಿಯಾಗಿ ಆಹಾರ ಸೇವಿಸಿದ್ದರೆ ಅದು ಜೀರ್ಣಗೊಳ್ಳಲು ಸಮಯ ನೀಡಿ ಮತ್ತು ನಂತರವಷ್ಟೇ ವ್ಯಾಯಾಮವನ್ನು ಆರಂಭಿಸಿ.

ವ್ಯಾಯಾಮದುದ್ದಕ್ಕೂ ನೀವು ಸರಿಯಾಗಿ ಉಸಿರಾಡುತ್ತೀರಿ ಎನ್ನುವುದನ್ನು ಖಚಿತಪಡಿಸಿಕೊಳ್ಳಿ. ನಿಮಗೆ ಗೊತ್ತಿಲ್ಲದೆ ಉಸಿರನ್ನು ಬಿಗಿ ಹಿಡಿದ ಸಂದರ್ಭಗಳೂ ಇರಬಹುದು.

ಅಲ್ಲದೆ ನಿಮ್ಮ ದಿನಚರಿಯಲ್ಲಿ ಯಾವುದೇ ಬದಲಾವಣೆಯು ಮೊದಲಿಗೆ ನಿಮಗೆ ಅಹಿತಕರವೆನ್ನಿಸಬಹುದು. ಆದರೆ ಅದಕ್ಕೆ ಬದಲಾವಣೆಗೆ ನೀವು ಹೊಂದಿಕೊಂಡಾಗ ಅದು ಸುಲಭವಾಗುತ್ತದೆ. ನಿಯಮಿತವಾಗಿ ವ್ಯಾಯಾಮ ಮಾಡುವುದರಿಂದ ನೀವು ಸದೃಢರಾಗುತ್ತೀರಿ ಮತ್ತು ಫಿಟ್ ಆಗಿ ಉಳಿಯುತ್ತೀರಿ. ಅದು ನಿಮ್ಮ ದೇಹತೂಕವನ್ನು ಪರಿಣಾಮಕಾರಿಯಾಗಿ ಇಳಿಸಲೂ ನೆರವಾಗುತ್ತದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X